ಹಿಂದಿ ಭಾಷೆ ಜೊತೆ ರಾಷ್ಟ್ರೀಯತೆಯನ್ನು ಗುರುತಿಸುವುದು ನಾಚಿಕೆಗೇಡಿನ ಸಂಗತಿ: ಕನಿಮೋಳಿ

ಹಿಂದಿ ಭಾಷೆಯನ್ನು ರಾಷ್ಟ್ರೀಯತೆ ಜತೆ ತಳುಕು ಹಾಕುವುದು ನಾಚಿಕೆಗೇಡಿನ ಸಂಗತಿ ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ.

Published: 13th August 2020 08:10 AM  |   Last Updated: 13th August 2020 08:10 AM   |  A+A-


Kanimozhi

ಕನಿಮೋಳಿ

Posted By : Shilpa D
Source : PTI

ಚೆನ್ನೈ: ಹಿಂದಿ ಭಾಷೆಯನ್ನು ರಾಷ್ಟ್ರೀಯತೆ ಜತೆ ತಳುಕು ಹಾಕುವುದು ನಾಚಿಕೆಗೇಡಿನ ಸಂಗತಿ ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ. 

ಭಾನುವಾರ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಮಹಿಳಾ ಅಧಿಕಾರಿಯೊಬ್ಬರಿಗೆ ತಮಿಳು ಅಥವಾ ಇಂಗ್ಲೀಷಿನಲ್ಲಿ ಮಾತನಾಡಿ, ನನಗೆ ಹಿಂದಿ ಗೊತ್ತಿಲ್ಲ’ ಎಂದು ಹೇಳಿದೆ. ಅದಕ್ಕೆ ಅವರು ‘ನೀವು ಭಾರತೀಯಳೇ’ ಎಂದು ಪ್ರಶ್ನಿಸಿದರು. ಭಾರತೀಯರಾಗಿದ್ದ ಮಾತ್ರಕ್ಕೆ ಎಲ್ಲರಿಗೂ ಹಿಂದಿ ಹೇಗೆ ಬರಲು ಸಾಧ್ಯ ಎಂಬುದನ್ನು ತಿಳಿಯಬಯಸುತ್ತೇನೆ‘ ಎಂದು ಕನಿಮೋಳಿ ಟ್ವೀಟಿಸಿದ್ದರು. ನಾವು ಭಾರತೀಯರಾಗಿದ್ದ ಮಾತ್ರಕ್ಕೆ ಹಿಂದಿ ಗೊತ್ತಿರಬೇಕೆಂದಿಲ್ಲ ಎಂದು ಕನಿಮೋಳಿ ಪ್ರಶ್ನಿಸಿದ್ದರು.

ಈ ಬಗ್ಗೆ ಬುಧವಾರ ಸಂಜೆ ಮಾಧ್ಯಮದವರಲ್ಲಿ ಮಾತನಾಡಿದ ಕನಿಮೋಳಿ, ಇಲ್ಲಿ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ಆದರೆ ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು ಎಂದಿದ್ದಾರೆ.

ನಾನು ಶಾಲೆಯಲ್ಲಿ ಹಿಂದಿ ಕಲಿಯಲೇ ಇಲ್ಲ, ನಾನು ಯಾರೊಬ್ಬರಿಗೂ ಹಿಂದಿ ತರ್ಜುಮೆ ಮಾಡಿಕೊಟ್ಟಿಲ್ಲ. ಇಂಗ್ಲಿಷ್ ತರ್ಜುಮೆ ಕೂಡಾ ಮಾಡಿಲ್ಲ. ಆ ಭಾಷೆ ಗೊತ್ತಿಲ್ಲದೆ ಅನುವಾದ ಹೇಗೆ ಸಾಧ್ಯ? ನಾನು ಶಾಲೆಯಲ್ಲಿ ತಮಿಳು ಮತ್ತು ಇಂಗ್ಲಿಷ್ ಮಾತ್ರ ಕಲಿತಿದ್ದೆ. ದೆಹಲಿಯಲ್ಲಿ ಹಲವು ವರ್ಷ ಇದ್ದರೂ ನನಗೆ ಹಿಂದಿ ಬರುವುದಿಲ್ಲ ಎಂದು ಕನಿಮೋಳಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ಹೇಳಿದೆ.

ನನಗೆ ಹಿಂದಿ ಬರುವುದಿಲ್ಲ ಎಂದು ಹಲವಾರು ನಾಯಕರಿಗೆ ಗೊತ್ತು. ನನಗೆ ಅಥವಾ ಯಾರಿಗಾದರೂ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ವಿಷಯವಲ್ಲ. ಹಿಂದಿ ಕಲಿತರೆ ಮಾತ್ರ ಭಾರತೀಯ ಆಗುವುದು ಹೇಗೆ ಎಂಬುದು ವಿಷಯ. ಒಂದೇ ವಿಚಾರಧಾರೆ, ಹಿಂದಿ ಮಾತನಾಡುವುದು, ಒಂದೇ ಧರ್ಮವನ್ನು ಪಾಲಿಸಿದರೆ ಮಾತ್ರ ಭಾರತೀಯ ಎಂದು ಪರಿಗಣಿಸುವುದು..ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ ಕನಿಮೋಳಿ.

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp