ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತೆರೆ: ತಿಂಗಳ ನಂತರ ಸಿಎಂ ಗೆಹ್ಲೋಟ್, ಪದಚ್ಯುತ ಡಿಸಿಎಂ ಸಚಿನ್ ಪೈಲಟ್ ಮುಖಾಮುಖಿ

ರಾಜಸ್ಥಾನ ಸರ್ಕಾರದ ವಿರುದ್ಧ ಬಂಡೆದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗುರುವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾದರು, 
ಸಿಎಂ ಗೆಹ್ಲೋಟ್, ಸಚಿನ್ ಪೈಲಟ್
ಸಿಎಂ ಗೆಹ್ಲೋಟ್, ಸಚಿನ್ ಪೈಲಟ್

ಜೈಪುರ್: ರಾಜಸ್ಥಾನ ಸರ್ಕಾರದ ವಿರುದ್ಧ ಬಂಡೆದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗುರುವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾದರು, 

ಪಕ್ಷದ ಮುಖಂಡರಾದ ಕೆ ಸಿ ವೇಣುಗೋಪಾಲ್, ಅವಿನಾಶ್ ಪಾಂಡೆ, ರಂದೀಪ್ ಸುರ್ಜೆವಾಲಾ, ಅಜಯ್ ಮಾಕೆನ್ ಮತ್ತು ಗೋವಿಂದ್ ಸಿಂಗ್ ದೋಟಾಸ್ರಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು, ಗೆಹ್ಲೋಟ್ ನಿವಾಸದಲ್ಲಿ ಈ ಎಲ್ಲಾ ನಾಯಕರು ಕ್ಯಾಮೆರಾಗಳಿಗೆ ಒಟ್ಟಾಗಿ ಪೋಸ್ ನೀಡಿದ್ದಾರೆ.

ಈ ವಾರದ ಪ್ರಾರಂಭದಲ್ಲಿ  ದೆಹಲಿಯ ಉನ್ನತ ನಾಯಕರ ಭೇಟಿಯ ನಂತರ ಪದಚ್ಯುತ ಉಪಮುಖ್ಯಮಂತ್ರಿ ಮತ್ತು ಇತರ 18 ಭಿನ್ನಮತೀಯ ಶಾಸಕರನ್ನು ಪಕ್ಷಕ್ಕೆ ಮರಳುವ ಬಗ್ಗೆ  ವಿಶ್ವಾಸ ವ್ಯಕ್ತಪಡಿಸಿದ ಪೈಲಟ್ ಮತ್ತು ಗೆಹ್ಲೋಟ್ ಪರಸ್ಪರ ಹಸ್ತಲಾಘವ ಮಾಡಿದ್ದಾರೆ. ಇದಾಗಿ ನಂತರ ಶುಕ್ರವಾರದ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಹ ನಡೆದಿದೆ,

ಶಾಸಕರಾದ ಭನ್ವರ್ಲಾಲ್ ಶರ್ಮಾ ಮತ್ತು ವಿಶ್ವವೇಂದ್ರ ಸಿಂಗ್ ಅವರನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು "ಪಿತೂರಿ" ಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಾಂಗ್ರೆಸ್ ಪಕ್ಷ ಕಳೆದ ತಿಂಗಳು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.ಇದೀಗ ನಿಖರವಾಗಿ ಒಂದು ತಿಂಗಳ ನಂತರ ಈ ಬಿಕ್ಕಟ್ಟಿಗೆ ಒಂದು ತಾರ್ಕಿಕ ಅಂತ್ಯ ಬಂದಂತೆ ಕಾಣಿಸುತ್ತಿದೆ,

/p>

ಈ ನಡುವೆ ರಾಜ್ಯ ವಿಧಾನಸಭೆಯಲ್ಲಿ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ರಾಜಸ್ಥಾನದಲ್ಲಿ ಬಿಜೆಪಿ ಗುರುವಾರ ಹೇಳಿದೆ. 200 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಮತ್ತು ಬಿಜೆಪಿ 72 ಶಾಸಕ ಬಲ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com