ಮೋಹನ್ ಭಾಗವತ್
ಮೋಹನ್ ಭಾಗವತ್

ಎಲ್ಲಾ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು ಸ್ವದೇಶಿಯತೆ ಅಲ್ಲ: ಮೋಹನ್ ಭಾಗವತ್

ಸ್ವದೇಶಿ ಅಂದರೆ ಎಲ್ಲ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದು ಎಂಬ ಅರ್ಥವಲ್ಲ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅದೇ ವೇಳೆ ದೇಶದಲ್ಲಿ ಸಾಂಪ್ರದಾಯಿಕವಾಗಿ ಕೊರತೆಯಿರುವ, ಸ್ಥಳೀಯವಾಗಿ ಲಭ್ಯವಿಲ್ಲದ ತಂತ್ರಜ್ಞಾನಗಳು ಅಥವಾ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ

ನವದೆಹಲಿ: ಸ್ವದೇಶಿ ಅಂದರೆ ಎಲ್ಲ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದು ಎಂಬ ಅರ್ಥವಲ್ಲ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅದೇ ವೇಳೆ ದೇಶದಲ್ಲಿ ಸಾಂಪ್ರದಾಯಿಕವಾಗಿ ಕೊರತೆಯಿರುವ, ಸ್ಥಳೀಯವಾಗಿ ಲಭ್ಯವಿಲ್ಲದ ತಂತ್ರಜ್ಞಾನಗಳು ಅಥವಾ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 

ಬುಧವಾರ ವರ್ಚುವಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಸ್ವಾವಲಂಬಿ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಬೇಕಿದೆ. ಕೋವಿಡ್ 19 ನಂತರದ ಜಗತ್ತಿಗೆ ಜಗತ್ತನ್ನು ಒಂದು ಮಾರುಕಟ್ಟೆ ಎಂದಲ್ಲ ಒಂದು ಕುಟುಂಬ ಒಂದು ಪರಿಗಣಿಸುವ ಆರ್ಥಿಕ ಮಾದರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸ್ವಾವಲಂಬಿ ಭಾರತದ ನಿರ್ಧಾರಕ್ಕೆ ಬೆಂಬಲ ನೀಡಿದ ಆರ್‌ಎಸ್‌ಎಸ್ ಮುಖ್ಯಸ್ಥ, ಸ್ವದೇಶಿ ಎಂದರೆ ಸ್ಥಳೀಯ ಉತ್ಪನ್ನಗಳು, ತಂತ್ರಜ್ಞಾನಗಳಿಗೆ ಉತ್ತೇಜನ ನೀಡುವುದು ಮತ್ತು ಆದ್ಯತೆ ನೀಡುವುದು. ಹಾಗಂತ ಎಲ್ಲಾ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕಾಗಿಲ್ಲ. ಸ್ಥಳೀಯವಾಗಿ ಲಭ್ಯವಿಲ್ಲದ ವಸ್ತುಗಳು ಅಥವಾ ತಂತ್ರಜ್ಞಾನವನ್ನು ಮಾತ್ರ ಆಮದು ಮಾಡಿಕೊಳ್ಳಲೇಬೇಕು ಮತ್ತು ಈ ವಸ್ತುಗಳನ್ನು ನಾವು ಭಾರತಕ್ಕೆ ಒಪ್ಪುವ ರೀತಿಯಲ್ಲಿ ಬದಲಾವಣೆ ಮಾಡಬೇಕು. 

ಆಮದು ಮಾಡಿಕೊಂಡ ವಸ್ತುಗಳ ಮುಂದೆ ಸಾಂಪ್ರದಾಯಿಕವಾಗಿ ಲಭ್ಯವಿರುವ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಕಡೆಗಣಿಸುವ ಕೆಲವು ಉದಾಹರಣೆಗಳನ್ನು ನೀಡಿದ ಅವರು, ದೇಶೀಯ ವಸ್ತುಗಳನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಗಬೇಕು ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com