ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂಗಳಿಂದ ಕೊಡುಗೆ!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ಸುಪ್ರಿಂಕೋರ್ಟ್ನಿರ್ದೇಶನದಂತೆ ಅಯೋಧ್ಯಾ ತೀರ್ಪಿನ ಅನ್ವಯ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ
ಅಯೋಧ್ಯೆ
ಅಯೋಧ್ಯೆ

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ಸುಪ್ರಿಂಕೋರ್ಟ್ನಿರ್ದೇಶನದಂತೆ ಅಯೋಧ್ಯಾ ತೀರ್ಪಿನ ಅನ್ವಯ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿ ಮೀಸಲಿಡಲಾಗಿದೆ,  ಧನ್ನೀಪುರ ಗ್ರಾಮದಲ್ಲಿ ಅಯೋಧ್ಯೆಯ ರಾಮಮಂದಿರದಿಂದ 20 ಕಿಮೀ ದೂರದಲ್ಲಿರುವ ಜಾಗದಲ್ಲಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಸಮಿತಿ ಭೂಮಿ ಅಭಿವೃದ್ಧಿ ಪಡಿಸುವುದಾಗಿ ಜುಲೈ 29 ರಂದು ಸುನ್ನಿ ಬೋರ್ಡ್ ಘೋಷಣೆ ಮಾಡಿತ್ತು.

ಮಸೀದಿ ನಿರ್ಮಾಣಕ್ಕಾಗಿ ಹಿಂದೂಗಳು ಕೊಡುಗೆ ನೀಡಲು ಮುಂದಾಗಿದ್ದು, ದೇವಾಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಮಸೀದಿ ನಿರ್ಮಾಣಕ್ಕಾಗಿ ಪ್ರಪಂಚದಲ್ಲಿರುವ ಶೇ. 60 ರಷ್ಟು ಹಿಂದೂಗಳು ಕೊಡುಗೆ ನೀಡಲು ಮುಂದೆ ಬಂದಿರುವುದಾಗಿ ಮೂಲಗಳು ತಿಳಿಸಿವೆ,

ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಂ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ, ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯಲ್ಲಿ ಅನೇಕ ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದು ಇದಕ್ಕೆ ಸಾಕ್ಷಿಯಾಗಿತ್ತು ಎಂದು ಐಐಸಿಎಫ್ ತಿಳಿಸಿದೆ. 

ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಯುಪಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ 5 ಎಕರೆ ಭೂಮಿಯನ್ನು ಗುರುತಿಸಿ ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್ 2019 ರ ನವೆಂಬರ್ 9 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದ ಯುಪಿ ಸರ್ಕಾರ 2020 ರ ಫೆಬ್ರವರಿಯಲ್ಲಿ ಧನ್ನಿಪುರ ಗ್ರಾಮದಲ್ಲಿ ಯುಪಿಎಸ್ಸಿಡಬ್ಲ್ಯೂಬಿಗೆ 5ಎಕರೆ ಭೂಮಿ ಹಂಚಿಕೆ ಮಾಡಿದೆ. ರಾಮ ದೇವಾಲಯದ ಭೂಮಿ ಪೂಜೆ ಸಮಾರಂಭಕ್ಕೆ ಮೂರು ದಿನಗಳ ಮೊದಲು ಅಯೋಧ್ಯೆ ಜಿಲ್ಲಾಡಳಿತವು ಆಗಸ್ಟ್ 2 ರಂದು ಐಐಸಿಎಫ್‌ಗೆ ಭೂಮಿಯನ್ನು ಹಸ್ತಾಂತರಿಸಿತು.

ಐಐಸಿಎಫ್ ಈಗಾಗಲೇ ಲಕ್ನೋದಲ್ಲಿ ಕಚೇರಿ ತೆರೆದಿದ್ದು. ದೇಣಿಗೆ ಸ್ವೀಕರಿಸಲು ಟ್ರಸ್ಟ್ ಮುಂದಿನ ವಾರದೊಳಗೆ ಪೋರ್ಟಲ್ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com