ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಇಂದು ಹೇಗಿತ್ತು? 

ಮಾಸ್ಕ್ ಗಳನ್ನು ಹೊಂದಿದ್ದ ಕಿಟ್, ಹ್ಯಾಂಡ್ ಸ್ಯಾನಿಟೈಸರ್ ನ ಸಣ್ಣ ಬಾಟಲ್, ಗ್ಲೌಸ್ ಗಳನ್ನು ಎಲ್ಲಾ ಕುರ್ಚಿಗಳ ಮೇಲೆ ಇಡಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಕಿಟ್ ಗಳ ಮೂಲಕ ಸ್ಪಷ್ಟ ಸೂಚನೆ ನೀಡಲಾಗಿತ್ತು. ಇಂದು ಕೋವಿಡ್-19 ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಕಂಡುಬಂದ ದೃಶ್ಯ.
ಕೆಂಪು ಕೋಟೆಗೆ ಭದ್ರತಾ ಪಡೆ ಕಾವಲು
ಕೆಂಪು ಕೋಟೆಗೆ ಭದ್ರತಾ ಪಡೆ ಕಾವಲು

ನವದೆಹಲಿ: ಮಾಸ್ಕ್ ಗಳನ್ನು ಹೊಂದಿದ್ದ ಕಿಟ್, ಹ್ಯಾಂಡ್ ಸ್ಯಾನಿಟೈಸರ್ ನ ಸಣ್ಣ ಬಾಟಲ್, ಗ್ಲೌಸ್ ಗಳನ್ನು ಎಲ್ಲಾ ಕುರ್ಚಿಗಳ ಮೇಲೆ ಇಡಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಕಿಟ್ ಗಳ ಮೂಲಕ ಸ್ಪಷ್ಟ ಸೂಚನೆ ನೀಡಲಾಗಿತ್ತು. ಇಂದು ಕೋವಿಡ್-19 ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಕಂಡುಬಂದ ದೃಶ್ಯ.

ಸಾಮಾನ್ಯ ದಿನಗಳಲ್ಲಾದರೆ ಇಂದು ಕೆಂಪು ಕೋಟೆ ಬಳಿ ಜನಸಾಗರ. ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆಯುವ ವಾರ್ಷಿಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಇಲ್ಲಿನ ಕಾರ್ಯಕ್ರಮ ನೋಡುವುದೇ ಚೆಂದ. ಆದರೆ ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 

ಈ ವರ್ಷ ಸುರಕ್ಷತೆ ಕ್ರಮ ಹೇಗಿತ್ತು?:ಮುಖ್ಯ ದ್ವಾರದಲ್ಲಿ ಸೀಮಿತ ಗಣ್ಯರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಒಳಗೆ ಹೋಗುವವರನ್ನೆಲ್ಲ ಥರ್ಮಲ್ ಸ್ಕ್ರೀನಿಂಗ್ ಮಾಡಿ ಭದ್ರತಾ ಪಡೆ ಒಳಗೆ ಬಿಡುತ್ತಿದ್ದರು. ಭದ್ರತಾ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರು. ಸೆಕ್ಯುರಿಟಿ ಗೇಟ್ ಹತ್ತಿರ ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿತ್ತು. 

ಪ್ರತಿ ಆಸನದಲ್ಲಿ ಸ್ಯಾನಿಟೈಸರ್ ಕಿಟ್, ಕೈ ವಸ್ತ್ರಗಳನ್ನು ಸೀಟಿನ ಹಿಂದೆ ಕಾರ್ಯಕ್ರಮದ ಪ್ಯಾಂಪ್ಲೆಟ್ ಜೊತೆಗೆ ಇಡಲಾಗಿತ್ತು. ವಿವಿಐಪಿಗಳು ಕುಳಿತುಕೊಳ್ಳುವಲ್ಲಿ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಲಾಗಿತ್ತು.6 ಅಡಿ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂಬ ಸಂದೇಶ ಅಲ್ಲಲ್ಲಿ ಕಾಣಿಸುತ್ತಿತ್ತು.

ಬಂದಿದ್ದ ಗಣ್ಯರು, ಭದ್ರತಾ ಸಿಬ್ಬಂದಿ, ವಿಐಪಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com