ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋವಿಡ್-19 ಔಷಧ: ಮಹತ್ವದ ಅಂಶ ಕಂಡುಕೊಂಡ ವಿಜ್ಞಾನಿಗಳು 

ಅತ್ಯಾಧುನಿಕ ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಬಳಕೆ ಮಾಡಿ ಕೋವಿಡ್-19 ಔಷಧಕ್ಕೆ ಸಂಬಂಧಪಟ್ಟಂತೆ ಮಹತ್ವದ ಅಂಶಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 

ವಾಷಿಂಗ್ಟನ್: ಅತ್ಯಾಧುನಿಕ ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಬಳಕೆ ಮಾಡಿ ಕೋವಿಡ್-19 ಔಷಧಕ್ಕೆ ಸಂಬಂಧಪಟ್ಟಂತೆ ಮಹತ್ವದ ಅಂಶಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. 

ಬೈಪೋಲಾರ್ ಅಸ್ವಸ್ಥತೆಗಳು ಮತ್ತು ಶ್ರವಣ ದೋಷಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡುವಂತಹ, ಈಗಾಗಲೇ ಇರುವ ಔಷಧವನ್ನು ಅಭಿವೃದ್ಧಿಪಡಿಸಿದರೆ ಅದು ಕೋವಿಡ್-19 ವಿರುದ್ಧ ಪರಿಣಾಮಕಾರಿ ಔಷಧವಾಗಬಲ್ಲದು ಎಂಬುದು ವಿಜ್ಞಾನಿಗಳ ಹೊಸ ಸಂಶೋಧನೆಯಾಗಿದೆ. 

ಈ ಔಷಧವನ್ನು ಅಭಿವೃದ್ಧಿಪಡಿಸಿ ಕೊರೋನಾಗೆ ಚಿಕಿತ್ಸೆ ನೀಡಿದರೆ ಕೊರೋನಾಗೆ ಕಾರಣವಾಗುವ ವೈರಾಣುಗಳು ಹೋಸ್ಟ್ ಸೆಲ್ ಗಳಲ್ಲಿ ಸಂತಾನೋತ್ಪತ್ತಿ ಅಥವಾ ದ್ವಿಗುಣಗೊಳ್ಳುವುದನ್ನು ತಡೆಗಟ್ಟಬಹುದಾಗಿದೆ. 

ಈ ಸಂಶೋಧನಾ ವರದಿ ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಲ್ಲಿ ಪ್ರಕಟಗೊಂಡಿದೆ. ಕೊರೋನಾ ವೈರಸ್ ನ ಜೀವನ ಚಕ್ರದಲ್ಲಿ ಮುಖ್ಯಪಾತ್ರ ವಹಿಸುವ ಎಂಪ್ರೋ ಎಂಬ ಮುಖ್ಯ ಪ್ರೋಟಿಯೇಸ್ ಅಣುವನ್ನು ಈ ಸಂಶೋಧನೆಯಲ್ಲಿ ವಿಶ್ಲೇಷಿಸಲಾಗಿದೆ. 

ಶಿಕಾಗೋ ಸೇರಿದಂತೆ ಅಮೆರಿಕಾದ ಉನ್ನತ ವಿವಿಗಳ ಸಂಶೋಧಕರ ಪ್ರಕಾರ ವೈರಾಣುವಿಗೆ ತನ್ನ ಜೆನೆಟಿಕ್ ಅಂಶದಿಂದ ಪ್ರೋಟೀನ್ಗಳ ಉತ್ಪಾದನೆಗೆ ಈ ಎಂಪ್ರೋ ಸಹಕಾರಿಯಾಗಿದ್ದು ಹೋಸ್ಟ್ ಸೆಲ್ ಗಳಲ್ಲಿ ವೈರಾಣು ದ್ವಿಗುಣಗೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. 

ಜೈವಿಕ ಅಣು ಮಾಡೆಲಿಂಗ್ ನ ಪರಿಣಿತಿಯಿಂದ ಈ ವೈರಾಣುವಿನ ವಿರುದ್ಧ ಹೋರಾಡಬಲ್ಲ ಈಗಾಗಲೇ ರಾಸಾಯನಿಕ ಸಂಯುಕ್ತಗಳನ್ನು ಸಂಶೋಧಕರು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. 

ವೈರಾಣು ವಿರೋಧಿ, ಆಂಟಿ ಇನ್ಫಾಮೇಟರಿ, ಆಂಟಿ ಆಕ್ಸಿಡೆಟೀವ್, ಬ್ಯಾಕ್ಟೀರಿಯಲ್, ಸೆಲ್ ಪ್ರೊಟೆಕ್ಟೀವ್ ಗುಣಲಕ್ಷಣಗಳನ್ನು ಹೊಂದಿರುವ ಎಬ್ಸೆಲೆನ್ ಎಂಬ ಔಷಧ ಎಂಪ್ರೋ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಸಾಮರ್ಥ್ಯವಿದೆ ಎಂದು ಸಂಶೋಧಕರ ಇತ್ತೀಚಿನ ಸಂಶೋಧನೆ ಹೇಳುತ್ತಿದೆ. 

Related Stories

No stories found.

Advertisement

X
Kannada Prabha
www.kannadaprabha.com