ಕಬ್ಬಿಗೆ ಕನಿಷ್ಠ ಬೆಲೆ: ಕೇಂದ್ರ ಸಂಪುಟದ ಅನುಮೋದನೆ

ಕಬ್ಬಿಗೆ ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ [ಎಫ್.ಆರ್.ಪಿ] ನಿಗದಿಪಡಿಸಲಾಗಿದೆ. 
ಕಬ್ಬಿನ ಚಿತ್ರ
ಕಬ್ಬಿನ ಚಿತ್ರ

ನವದೆಹಲಿ: ಕಬ್ಬಿಗೆ ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ [ಎಫ್.ಆರ್.ಪಿ] ನಿಗದಿಪಡಿಸಲಾಗಿದೆ.
 
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ  ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ)ದ ಶಿಫಾರಸುಗಳ ಅನ್ವಯ 2020-21ರ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ ದರಕ್ಕೆ ಅನುಮೋದನೆ ನೀಡಿದೆ.
 
2020-21ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಎಫ್.ಆರ್.ಪಿ ಯು ಶೇ.10 ರಷ್ಟು ಮೂಲ ರಿಕವರಿ ದರಕ್ಕೆ ಪ್ರತಿ ಕ್ವಿಂಟಲ್ ಗೆ 285 ರೂ, ಎಫ್,ಆರ್.ಪಿ, ರಿಕವರಿ ಶೇ.9.5 ಅಥವಾ ಅದಕ್ಕಿಂತ ಕಡಿಮೆ ಇರುವ ಕಾರ್ಖಾನೆಗಳಿಗೆ ಎಫ್.ಆರ್.ಪಿ ಪ್ರತಿ ಕ್ವಿಂಟಲ್ ಗೆ 270.75 ರೂ ನಿಗದಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com