ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಪ್ರತಿಮ ದೃಷ್ಟಿಕೋನ ಹೊಂದಿದ್ದ ವ್ಯಕ್ತಿ: ರಾಹುಲ್ ಗಾಂಧಿ

ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಅಪ್ರತಿಮ ದೂರ ದೃಷ್ಟಿ ಹೊಂದಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ರಾಜೀವ್ ಗಾಂಧಿ-ರಾಹುಲ್
ರಾಜೀವ್ ಗಾಂಧಿ-ರಾಹುಲ್

ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಅಪ್ರತಿಮ ದೂರ ದೃಷ್ಟಿ ಹೊಂದಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದಂದು  ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಅವರನ್ನು ತಂದೆಯಾಗಿ ಪಡೆದಿದ್ದು ನಂಬಲಾಗದಷ್ಟು ಅದೃಷ್ಟ ಹಾಗೂ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

“ರಾಜೀವ್ ಗಾಂಧಿ ಅವರು ಪ್ರಸಕ್ತ ಕಾಲಕ್ಕಿಂತ ಬಹಳ ಮುಂದಿನ ಪ್ರಚಂಡ ದೃಷ್ಟಿಕೋನ ಹೊಂದಿದ್ದ ವ್ಯಕ್ತಿ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಹಾನುಭೂತಿ ಮತ್ತು ಪ್ರೀತಿಯ ಮನುಷ್ಯರಾಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com