ಭಾರತವನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದ ನಮ್ಮ ವೈದ್ಯಕೀಯ ಸಿಬ್ಬಂದಿ ದೇಶದ ಹೆಮ್ಮೆ: ಪೀಯೂಷ್ ಗೋಯಲ್‌

ದೇಶದ ವೈದ್ಯಕೀಯ ಸಿಬ್ಬಂದಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ಜಾಗತಿಕ ಒಪ್ಪಂದ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರತ ಓರ್ವ ವಿಶ್ವಾಸಾರ್ಹ ಪಾಲುದಾರ ಎಂಬುದನ್ನು ಜಗತ್ತಿಗೆ ತೊರಿಸಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಗುರುವಾರ ಹೇಳಿದ್ದಾರೆ.
ವೈದ್ಯರು
ವೈದ್ಯರು

ನವದೆಹಲಿ: ದೇಶದ ವೈದ್ಯಕೀಯ ಸಿಬ್ಬಂದಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ಜಾಗತಿಕ ಒಪ್ಪಂದ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರತ ಓರ್ವ ವಿಶ್ವಾಸಾರ್ಹ ಪಾಲುದಾರ ಎಂಬುದನ್ನು ಜಗತ್ತಿಗೆ ತೊರಿಸಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಗುರುವಾರ ಹೇಳಿದ್ದಾರೆ.

ಸಿಐಐ 12ನೇ ಮೆಡ್‌ ಟೆಕ್‌ ಜಾಗತಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವ ಮತ್ತು ಭಾರತಕ್ಕೆ ಅಗತ್ಯ ಪ್ರಮಾಣದ ಪೂರೈಕೆ ಮಾಡುವುದನ್ನು ಔಷಧ ಉದ್ಯಮ ಖಾತರಿಪಡಿಸಬೇಕು ಎಂದರು.

ವೈದ್ಯಕೀಯ ಉಪಕರಣಗಳ ಉದ್ಯಮ ನಮಗೆ ಕೋವಿಡ್‌ -19 ವಿರುದ್ಧದ ಹೋರಾಟಕ್ಕೆ ದೇಶೀಯವಾಗಿ ಉತ್ಪನ್ನಗಳನ್ನು ತಯಾರಿಸಲು ನೆರವಾಗುತ್ತದೆ. ನಮ್ಮ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ ಅವಿರತವಾಗಿ ಸಾಮಾನ್ಯ ಜನರ ಸೇವೆ ಮಾಡುವ ಮೂಲಕ ದೇಶದ ಭದ್ರತೆಗೆ ನೆರವು ನೀಡಿದ್ದಾರೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com