ಬಿಜೆಪಿ ಜತೆ ಶಾಮೀಲು: ರಾಹುಲ್ ಗಾಂಧಿ ಹಾಗೆ ಹೇಳಿಯೇ ಇಲ್ಲ ಎಂದ ಕಾಂಗ್ರೆಸ್

ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರು ಬಿಜೆಪಿ ಜೊತೆ ಶಾಮೀಲಾಗಿ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಹೇಳಿಯೇ ಇಲ್ಲ. ಇದು ಕೇವಲ ವದಂತಿ ಎಂದು ಕಾಂಗ್ರೆಸ್ ಸೋಮವಾರ ಸ್ಪಷ್ಟಪಡಿಸಿದೆ.
ಕಪಿಲ್ ಸಿಬಲ್ - ರಾಹುಲ್ ಗಾಂಧಿ - ಗುಲಾಂ ನಬಿ ಆಜಾದ್
ಕಪಿಲ್ ಸಿಬಲ್ - ರಾಹುಲ್ ಗಾಂಧಿ - ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರು ಬಿಜೆಪಿ ಜೊತೆ ಶಾಮೀಲಾಗಿ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಹೇಳಿಯೇ ಇಲ್ಲ. ಇದು ಕೇವಲ ವದಂತಿ ಎಂದು ಕಾಂಗ್ರೆಸ್ ಸೋಮವಾರ ಸ್ಪಷ್ಟಪಡಿಸಿದೆ.

ಸೋನಿಯಾ ಗಾಂಧಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗಲೇ ಉದ್ದೇಶಪೂರ್ವಕಾಗಿ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಕೆಲವರು ಪತ್ರ ಬರೆದಿದ್ದಾರೆ. ಪಕ್ಷದ ಕೆಲವು ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ರಾಹುಲ್ ಹರಿಹಾಯ್ದಿರುವುದಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಟ್ವೀಟ್ ಮಾಡಿದ್ದರು. ಆದರೆ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅವರು ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ.

ಇದೀಗ ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿರುವ ಪಕ್ಷ, ಅವರು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. 

"ರಾಹುಲ್ ಗಾಂಧಿ ಅವರು ಆ ರೀತಿ ಎಂದೂ ಹೇಳಿಲ್ಲ, ಸಿಡಬ್ಲ್ಯೂಸಿ ಸಭೆಯಲ್ಲಿ ಅಥವಾ ಹೊರಗಡೆ ಕೆಲವರು ಬಿಜೆಪಿ ಜತೆ ಸಾಮೀಲಾಗಿದ್ದಾರೆ ಎಂದು ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.

ಇನ್ನು ಆ ರೀತಿ. ಅರ್ಥ ಕೊಡುವಂತಹ ಯಾವುದೇ ಪದವನ್ನು ರಾಹುಲ್ ಗಾಂಧಿ ಬಳಕೆ ಮಾಡಿಲ್ಲ ಎಂದು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಳಿದ್ದಾರೆ. ಅಲ್ಲದೆ ಕಪಿಲ್ ಸಿಬಲ್ ಕೂಡ ಈ ರೀತಿಯ ವರದಿಗಳನ್ನು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com