ಪ್ರತೀಕಾರಕ್ಕಾಗಿ ಕೊಲೆ ಯತ್ನ: ದೆಹಲಿಯಲ್ಲಿ ಮಾಜಿ ಕಿರಿಯರ ರಾಷ್ಟ್ರೀಯ ಕುಸ್ತಿಪಟು ಅರೆಸ್ಟ್

ಚಿಕ್ಕಪ್ಪನನ್ನು ಕೊಲೆ ಮಾಡಿದ ಆರೋಪಿಗಳನ್ನು ಕೊಲ್ಲುವ ಪ್ರಯತ್ನ ನಡೆಸಿದ್ದ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿಪಟುವನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಸ್ತಿಪಟು ಕುನಾಲ್ ಮತ್ತು ಅವರ ಸ್ನೇಹಿತ ನವೀನ್ ಎಂದು ಗುರುತಿಸಲಾಗಿದೆ.

Published: 25th August 2020 11:05 AM  |   Last Updated: 25th August 2020 11:05 AM   |  A+A-


ಕುನಾಲ್

Posted By : Raghavendra Adiga
Source : Online Desk

ನವದೆಹಲಿ: ಚಿಕ್ಕಪ್ಪನನ್ನು ಕೊಲೆ ಮಾಡಿದ ಆರೋಪಿಗಳನ್ನು ಕೊಲ್ಲುವ ಪ್ರಯತ್ನ ನಡೆಸಿದ್ದ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿಪಟುವನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಸ್ತಿಪಟು ಕುನಾಲ್ ಮತ್ತು ಅವರ ಸ್ನೇಹಿತ ನವೀನ್ ಎಂದು ಗುರುತಿಸಲಾಗಿದೆ.

19 ವರ್ಷದ ಕುನಾಲ್  2017 ರ ರಾಷ್ಟ್ರೀಯ ಜೂನಿಯರ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಪವನ್  ಹಾಗೂ ಆತನ ಸ್ನೇಹಿತ ಲಕ್ಷ್ಮಣ್  ತಮ್ಮ ಬೈಕ್‌ಗಳಲ್ಲಿ ತೆರಳುವಾಗ ಅವರನ್ನು ಕುನಾಲ್ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದ. ಹೊಟ್ಟೆಗೆ ಗುಂಡು ತಾಕಿ ಅವರು ಆಸ್ಪತ್ರೆ ಸೇರಿದ್ದು ಪೋಲೀಸರು ಅವರ ಪೂರ್ವೇತಿಹಾಸ ಕೆದಕಲಾಗಿ ಪವನ್ ಮೇಲೆ ಮೂರು ಕೊಲೆ ಪ್ರಕರಣಗಳು ಹಾಗೂ ಒಂದು ಕೊಲೆ ಯತ್ನ ಪ್ರಕರಣಗಳಿದ್ದದ್ದು ಕಂಡುಬಂದಿದೆ. ಸಧ್ಯ ಕುನಾಲ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕುನಾಲ್ ಹೇಳಿದಂತೆ 1990 ರಲ್ಲಿ ಪವನ್ ಮತ್ತು ಕುನಾಲ್ ಚಿಕ್ಕಪ್ಪ ನಡುವೆ ಜಗಳವಾಗಿತ್ತು.  1993 ರಲ್ಲಿ ಪವನ್ ನಿಂದ ಕುನಾಲ್ ಚಿಕ್ಕಪ್ಪ ಹತ್ಯೆಯಾಗಿದ್ದರು. ಹಾಗಾಗಿ ಚಿಕ್ಕಪ್ಪನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಅವನು ನವೀನ್ ಜೊತೆ ಸಂಚು ರೂಪಿಸಿದ್ದನೆಂದು ಪೋಲೀಸರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp