ಪಶ್ಚಿಮ ಬಂಗಾಳ: ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 7 ಮಂದಿ ಬಂಧನ

ಬುಡಕಟ್ಟು ಮಹಿಳೆಯೊಬ್ಬರನ್ನು ಬುಡಕಟ್ಟು ಸಮುದಾಯಕ್ಕೆ ಸೇರದ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧದ ಕಾರಣಕ್ಕಾಗಿ "ಕಾಂಗರೂ ನ್ಯಾಯಾಲಯ"(ಬುಡಕಟ್ಟು ಜನಾಂಗದವರ ನ್ಯಾಯ ತೀರ್ಮಾನದ ವೇದಿಕೆ) ದ ಆದೇಶದನ್ವಯ  50,000  ರು. ಪಾವತಿಸದ ಹಿನ್ನೆಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ: ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 7 ಮಂದಿ ಬಂಧನ

ಕೋಲ್ಕತ್ತಾ: ಬುಡಕಟ್ಟು ಮಹಿಳೆಯೊಬ್ಬರನ್ನು ಬುಡಕಟ್ಟು ಸಮುದಾಯಕ್ಕೆ ಸೇರದ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧದ ಕಾರಣಕ್ಕಾಗಿ "ಕಾಂಗರೂ ನ್ಯಾಯಾಲಯ"(ಬುಡಕಟ್ಟು ಜನಾಂಗದವರ ನ್ಯಾಯ ತೀರ್ಮಾನದ ವೇದಿಕೆ) ದ ಆದೇಶದನ್ವಯ  50,000  ರು. ಪಾವತಿಸದ ಹಿನ್ನೆಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಮಹಿಳೆ ಮತ್ತು ಆಕೆಯ ಪ್ರೇಮಿ ಸ್ಥಳೀಯ ಮಾರುಕಟ್ಟೆಯಿಂದ  ಹಿಂತಿರುಗುತ್ತಿದ್ದಾಗ ಸಿಕ್ಕುಬಿದ್ದಿದ್ದಾರೆ. ಅವರನ್ನು ಅದೇ ಪ್ರದೇಶದ ಕ್ಲಬ್ ಒಂದರಲ್ಲಿ ಬಂಧಿಸಿಡಲಾಗಿದೆ, ಅಲ್ಲೇ ಅವರಿಗಾಗಿ ಕಾಂಗರೂ ನ್ಯಾಯಾಲಯ ಸ್ಥಾಪಿಸಲಾಗಿ ಅದಕ್ಕೂ ಮುನ್ನ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಕಾಂಗರೂ ನ್ಯಾಯಾಲಯದ ತೀರ್ಪಿನ ಜಾರಿಯಾಗದ ಕಾರಣ ಮಹಿಳೆಯನ್ನು ಕ್ಲಬ್ ನ ಹಿಂಭಾಗಕ್ಕೆ ಎಳೆದೊಯ್ದ ಐವರ ಗುಂಪು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 18 ರಂದು ಈ ಘಟನೆ ನಡೆದಿದ್ದರೂ, ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡುವ ಧೈರ್ಯವನ್ನು ಸಂತ್ರಸ್ತೆ ಹೊಂದಿರಲಿಲ್ಲ. . ಬುಡಕಟ್ಟು ಜನಾಂಗದವರ ಸಾಮಾಜಿಕ ವಿಭಾಗದ ಸ್ಥಳೀಯ ಮುಖಂಡರು ಮಹಿಳೆಯನ್ನು ಪೊಲೀಸರ ಬಳಿಗೆ ಕರೆದೊಯ್ದ ನಂತರ ಈ ಸಾಮೂಹಿಕ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ಬುಡಕಟ್ಟು ಮುಖ್ಯಸ್ಥ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. 

ಸಂತ್ರಸ್ತೆಯ ಪತಿ  ಕೆಲವು ವರ್ಷಗಳ ಹಿಂದೆ ನಿಧನವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆಕೆ ಅದೇ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. "ಸ್ಥಳೀಯ ಬುಡಕಟ್ಟು ಜನಾಂಗದವರು ಈ ಸಂಬಂಧದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮತ್ತು ಈ ಘಟನೆ ಅವರ ವಿರೋಧದ ಪರಿಣಾಮವೇ ಆಗಿದೆ. " ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮೊಹಮ್ಮದ್ ಬಜಾರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಮಹಿಳೆ : “ಪುರುಷರ ಗುಂಪು ನಮ್ಮನ್ನು ಸ್ಥಳೀಯ ಕ್ಲಬ್‌ಗೆ ಕರೆದೊಯ್ಯಿತು, ಅಲ್ಲಿ ನಮ್ಮ ಮೇಲೆ ಹಲ್ಲೆ ನಡೆಯಿತು. ನನಗೆ ಸಾಧ್ಯವಾಗದ 50,000 ರೂ.ಗಳ ದಂಡವನ್ನು ಪಾವತಿಸಲು ಹೇಳಲಾಯಿತು. ಮರುದಿನ ಬೆಳಿಗ್ಗೆ ನನ್ನ ಮೇಲೆ ಅತ್ಯಾಚಾರ ನಡೆಸಿದ ನಂತರ ಬಿಡುಗಡೆ ಮಾಡಲಾಯಿತು. ” ಎಂದಿದ್ದಾರೆ. ಮಹಿಳೆ ಎಫ್‌ಐಆರ್‌ನಲ್ಲಿ ಐದು ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎಂದು ಬಿರ್ಭಮ್ ಪೊಲೀಸ್ ಅಧೀಕ್ಷಕ ಶ್ಯಾಮ್ ಸಿಂಗ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com