ದೇಶದ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರದ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ 

ಭಾರತದಲ್ಲಿ ರಾಷ್ಟ್ರ ವಿರೋಧಿ ಮತ್ತು ಬಡಜನರ ವಿರೋಧಿ ಶಕ್ತಿಗಳು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಮತ್ತು ದೇಶದ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರತ್ವದ ಪ್ರಭಾವ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಭಾರತದಲ್ಲಿ ರಾಷ್ಟ್ರ ವಿರೋಧಿ ಮತ್ತು ಬಡಜನರ ವಿರೋಧಿ ಶಕ್ತಿಗಳು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಮತ್ತು ದೇಶದ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರತ್ವದ ಪ್ರಭಾವ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಗಳಿಸಿ  75 ವರ್ಷಗಳ ನಂತರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಊಹಿಸಿರಲಿಲ್ಲ ಎಂದು ಅವರು ಹೇಳಿದರು, "ಕೆಟ್ಟ ಆಲೋಚನೆ ಈಗ ಪ್ರಾಬಲ್ಯ ಸಾಧಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಮತ್ತು ಪ್ರಜಾಪ್ರಭುತ್ವದ ಅಂಗಸಂಸ್ಥೆಗಳು ನಾಶವಾಗುತ್ತಿದೆ."

ಛತ್ತೀಸ್ ಘರ್ ನ ನವ ರಾಯ್ಪುರದಲ್ಲಿ ನಿರ್ಮಾಣವಾಗಲಿರುವ ನೂತನ ವಿಧಾನಸಭೆ ಕಟ್ಟಡದ ಶಿಲಾನ್ಯಾಸ  ಸಮಾರಂಭವನ್ನುಸೋನಿಯಾ ಗಾಂಧಿ  ಉದ್ಘಾಟಿಸಿ ಹಿಂದಿಯಲ್ಲಿ ರೆಕಾರ್ಡ್ ಮಾಡಿದ ವಿಡಿಯೋ ಸಂದೇಶದ ಮೂಲಕ ಮಾತನಾಡುತ್ತಿದ್ದರು.

"ಕಳೆದ ಕೆಲವು ಸಮಯದಿಂದ, ನಮ್ಮ ದೇಶವನ್ನು ಹಳಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಮುಂದೆ ಹೊಸ ಸವಾಲುಗಳು ಇದೆ. ದೇಶವು ಅಡ್ಡಹಾದಿಯಲ್ಲಿ ನಿಂತಿದೆ. ಬಡಜನ ವಿರೋಧಿ ರಾಷ್ಟ್ರ ವಿರೋಧಿ ಶಕ್ತಿಗಳು ಜನರು ಪರಸ್ಪರ ಎದುರಾಳಿಗಳಂತೆ ಆಡಲು ದ್ವೇಷವನ್ನು, ಹಿಂಸೆಯ ವಿಷವನ್ನು ಪಸರಿಸುತ್ತಿದೆ.

"ಕೆಟ್ಟ ಆಲೋಚನೆಯು ಉತ್ತಮ ಆಲೋಚನೆ ಮೇಲೆ ಮೇಲುಗೈ ಸಾಧಿಸುತ್ತಿದೆ. " ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com