ಕೊವಿಡ್-19: ಮಹಾರಾಷ್ಟ್ರದಲ್ಲಿ ಮತ್ತೆ 341 ಪೊಲೀಸರಿಗೆ ಪಾಸಿಟಿವ್, ಇಬ್ಬರು ಸಾವು

ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಸೋಮವಾರ ಮತ್ತೆ 341 ಪೊಲೀಸರಿಗೆ ವಕ್ಕರಿಸಿದೆ. ಅಲ್ಲದೆ ಇಬ್ಬರು ಪೊಲೀಸರನ್ನು ಬಲಿ ಪಡೆದಿದೆ.
ಸಾಂದದರ್ಭಿಕ ಚಿತ್ರ
ಸಾಂದದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಸೋಮವಾರ ಮತ್ತೆ 341 ಪೊಲೀಸರಿಗೆ ವಕ್ಕರಿಸಿದೆ. ಅಲ್ಲದೆ ಇಬ್ಬರು ಪೊಲೀಸರನ್ನು ಬಲಿ ಪಡೆದಿದೆ.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 341 ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತ ಪೊಲೀಸರ ಸಂಖ್ಯೆ 15,294ಕ್ಕೆ ಏರಿಕೆಯಾಗಿದೆ.

15,294 ಸೋಂಕಿತರ ಪೈಕಿ 12306 ಪೊಲೀಸರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 2832 ಸಿಬ್ಬಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಇಂದು ಮತ್ತೆ ಇಬ್ಬರು ಪೊಲೀಸರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com