ಮದ್ಯದ ದೊರೆಗೆ ಭಾರೀ ಹಿನ್ನೆಡೆ: ಸುಪ್ರೀಂ ಕೋರ್ಟ್ ನಲ್ಲಿ ವಿಜಯ್ ಮಲ್ಯ ಮನವಿ  ವಜಾ

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಲಾಯನಗೈದ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ

ನವದೆಹಲಿ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಲಾಯನಗೈದ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದಯುಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, “ಪರಿಶೀಲನಾ ಅರ್ಜಿಗಳಿಗೆ ಯಾವ ಅರ್ಹತೆ ಇಲ್ಲ  ಹಾಗಾಗಿ ಅರ್ಜಿ ವಜಾಗೊಳಿಸಲಾಗಿದೆ" ಎಂದಿದೆ.

ಡಯಾಜಿಯೊದಿಂದ ಪಡೆದ 40 ಮಿಲಿಯನ್ ಅಮೆರಿಕನ್ ಡಾಲರ್  ಹಣವನ್ನು ತನ್ನ ಮಕ್ಕಳ ಖಾತೆಗೆ ವರ್ಗಾಯಿಸಿದ್ದಕ್ಕಾಗಿ 2017 ರ ಮೇ 9 ರಂದು ಸುಪ್ರೀಂ ಕೋರ್ಟ್ ಅವರು ತಪ್ಪಿತಸ್ಥರೆಂದು ಹೇಳಿತ್ತು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಪಾವತಿಸದ ಸಾಲ ರೂಪದಲ್ಲಿ ಮಲ್ಯ 9,000 ಕೋಟಿ ರೂ.  ವರ್ಗಾವಣೆಯಾದ ಬ್ಯಾಂಕ್ ಖಾತೆಗಳನ್ನು ಬಹಿರಂಗಪಡಿಸದ ಕಾರಣ ಎಸ್‌ಬಿಐ ಮಲ್ಯ ವಿರುದ್ಧ ಆದೇಶ ಉಲ್ಲಂಘನೆ ಅರ್ಜಿ (contempt petition) ಸಲ್ಲಿಸಿತ್ತು.ಇದಲ್ಲದೆ, ಈ ಮೊತ್ತವನ್ನು ಬ್ಯಾಂಕುಗಳಿಗೆ ಜಮಾ ಮಾಡದ ಅವರನ್ನು ನ್ಯಾಯಾಲಯ ತಪ್ಪಿತಸ್ಥ ಎಂದು ಹೇಳಿದೆ.

ಆದರೆ ಈ ಮೊತ್ತವು ತನ್ನ ಆಸ್ತಿಯ ಭಾಗವಲ್ಲ ಎಂದು ಅಫಿಡವಿಟ್ ಪರಿಗಣಿಸಲು ಮಲ್ಯ ಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ತಪ್ಪಿತಸ್ಥರೆಂದು ಪರಿಗಣಿಸಿದರೆ ಅವರು ತಮ್ಮ  ಮೇಲ್ಮನವಿಯನ್ನು ಕಳೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಹಿಂದೆ ಈ ಪ್ರಕರಣವು ಜೂನ್ 2020 ರಲ್ಲಿ ವಿಚಾರಣೆಗೆ ಬಂದಾಗ, ಪರಿಶೀಲನಾ ಅರ್ಜಿಯನ್ನು ಪಟ್ಟಿ ಮಾಡುವಲ್ಲಿ ಅನಗತ್ಯ ವಿಳಂಬದ ಬಗ್ಗೆ ಉನ್ನತ ನ್ಯಾಯಾಲಯವು ತನ್ನ ನೋಂದಾವಣೆ ಅಧಿಕಾರಿಗಳಿಂದ ವಿವರಣೆಯನ್ನು ಕೋರಿತ್ತು.

ಆಗಸ್ಟ್ 6 ರಂದು ಈ ವಿಷಯವನ್ನು ಕೈಗೆತ್ತಿಕೊಂಡಾಗ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ನಿರ್ಣಾಯಕ ದಾಖಲೆಗಳನ್ನು ಕಂಡುಹಿಡಿಯಲಾಗದ ಕಾರಣ ಅದನ್ನು ಮತ್ತೆ ಮುಂದೂಡಲಾಗಿತ್ತು. ಅಂತಿಮವಾಗಿ ಆಗಸ್ಟ್ 27 ರಂದು ಪ್ರಕರಣದ ವಿಚಾರಣೆ ನಡೆಸಿ ತೀರ್ಪನ್ನು ಇಂದಿನ ದಿನಕ್ಕೆ ಕಾಯ್ದಿರಿಸಲಾಗಿತ್ತು.

ಮಲ್ಯ ಅವರ ಒಡೆತನದ ಕಂಪೆನಿಗಳು 2016 ರಲ್ಲಿ ನೀಡಬೇಕಿದ್ದ 6,300 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಕೋರಿ ಮಲ್ಯ ವಿರುದ್ಧ ಕನಿಷ್ಠ 14 ಬ್ಯಾಂಕುಗಳು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಮಂಡಳಿಗೆ ತೆರಳಿದ್ದವು. ಮಲ್ಯ ಅವರ ಪಾಸ್‌ಪೋರ್ಟ್ ಸ್ಥಗಿತಗೊಳಿಸಬೇಕು ಮತ್ತು  ಅವರನ್ನು  ಬಂಧಿಸಬೇಕು ಎಂದು ಬ್ಯಾಂಕುಗಳು ಒತ್ತಾಯಿಸಿದ್ದವು. ಆದಾಗ್ಯೂ, ಡಿಆರ್‌ಟಿ ಆ ಮನವಿಯನ್ನು  ಆಲಿಸುವಲ್ಲಿ ವಿಫಲವಾಯಿತು, ಬ್ಯಾಂಕುಗಳು ಕರ್ನಾಟಕ ಹೈಕೋರ್ಟ್‌ಗೆ  ತೆರಳಲು ಡಿಆರ್‌ಟಿಗೆ ಸೂಕ್ತ ನಿರ್ದೇಶನಗಳನ್ನು ಕೋರಿ ಅವರು ಸ್ಥಳಾಂತರಗೊಂಡ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರೇರೇಪಿಸಿತು ಆದರೆ ಅಂತಹಾ ಮನವಿ ಮನ್ನಿಸಲು ಹೈಕೋರ್ಟ್ ನಿರಾಕರಿಸಿತು ಮತ್ತು ಬ್ಯಾಂಕುಗಳು ನಂತರ ಸುಪ್ರೀಂ ಕೋರ್ಟ್ ಗೆ ತೆರಳಿದ್ದವು.

ಆದರೆ ಆ ಮಧ್ಯೆ ಮಲ್ಯ ಭಾರತ ಬಿಟ್ಟು ಲಂಡನ್ ಗೆ ಪಲಾಯನ ಮಾಡಿದ್ದರು.  ನ್ಯಾಯಾಲಯದ ಉಲ್ಲಂಘನೆಗಾಗಿ  ಅವರಿಗೆ ಡಬೇಕಾದ ಶಿಕ್ಷೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಮಲ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ 2017 ರ ಮೇ ಆದೇಶದಲ್ಲಿ ಕೇಂದ್ರವನ್ನು ಕೋರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com