ಗುಜರಾತ್ ನ ಬಿಜೆಪಿ ಸಂಸದ ಅಭಯ್ ಭಾರದ್ವಾಜ್ ಚೆನ್ನೈನಲ್ಲಿ ನಿಧನ
ಖ್ಯಾತ ವಕೀಲ ಮತ್ತು ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಮಂಗಳವಾರ ಕೋವಿಡ್-19 ಸಂಬಂಧಿಸಿದ ಸಮಸ್ಯೆಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Published: 01st December 2020 08:47 PM | Last Updated: 01st December 2020 08:47 PM | A+A A-

ಅಭಯ್ ಭಾರದ್ವಾಜ್
ಗಾಂಧಿನಗರ: ಖ್ಯಾತ ವಕೀಲ ಮತ್ತು ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಮಂಗಳವಾರ ಕೋವಿಡ್-19 ಸಂಬಂಧಿಸಿದ ಸಮಸ್ಯೆಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
66 ವರ್ಷದ ಭಾರದ್ವಾಜ್ ಕಳೆದ ಜೂನ್‌ನಲ್ಲಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪಕ್ಷದ ಸಭೆಗಳು ಮತ್ತು ರಾಜ್‌ಕೋಟ್‌ನಲ್ಲಿ ನಡೆದ ರೋಡ್ ಶೋಗೆ ಹಾಜರಾದ ನಂತರ ಆಗಸ್ಟ್ 31 ರಂದು ಅವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿತ್ತು.
ಸಂಸದ ಅಭಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಗುಜರಾತ್‌ನ ರಾಜ್ಯಸಭಾ ಸಂಸದರಾದ ಶ್ರೀ ಅಭಯ್ ಭಾರದ್ವಾಜ್ ಜಿ ಅವರು ವಿಶೇಷ ವಕೀಲರಾಗಿದ್ದರು ಮತ್ತು ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ರಾಷ್ಟ್ರೀಯ ಅಭಿವೃದ್ಧಿಯ ಬಗ್ಗೆ ಉತ್ಸಾಹ ಹೊಂದಿರುವ ಪ್ರಕಾಶಮಾನವಾದ ಮತ್ತು ಒಳನೋಟವುಳ್ಳ ಮನಸ್ಸನ್ನು ನಾವು ಕಳೆದುಕೊಂಡಿರುವುದು ವಿಷಾದಕರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಓಂ ಶಾಂತಿ.
Rajya Sabha MP from Gujarat, Shri Abhay Bharadwaj Ji was a distinguished lawyer and remained at the forefront of serving society. It is sad we have lost a bright and insightful mind, passionate about national development. Condolences to his family and friends. Om Shanti.
— Narendra Modi (@narendramodi) December 1, 2020