ರೈತರ 'ದೆಹಲಿ ಚಲೋ' ಪ್ರತಿಭಟನೆ: ಉತ್ತರ ರೈಲ್ವೆಯಿಂದ ಕೆಲವು ರೈಲುಗಳ ಸಂಚಾರ ರದ್ದು
ಪಂಜಾಬ್ ರಾಜ್ಯದ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ಮಾಡುತ್ತಿರುವುದರಿಂದ ಉತ್ತರ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದೆ, ಇನ್ನು ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
Published: 02nd December 2020 07:56 AM | Last Updated: 02nd December 2020 12:38 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪಂಜಾಬ್ ರಾಜ್ಯದ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ಮಾಡುತ್ತಿರುವುದರಿಂದ ಉತ್ತರ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರವನ್ನು ಬದಲಾಯಿಸಲಾಗಿದೆ, ಇನ್ನು ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಅಜ್ಮರ್-ಅಮೃತಸರ 09613 ವಿಶೇಷ ರೈಲು ಇಂದು ಸಂಚರಿಸಬೇಕಾಗಿದ್ದು ರದ್ದಾಗಲಿದೆ. ಅದೇ ರೀತಿ ಅಮೃತಸರ-ಅಜ್ಮರ್ ವಿಶೇಷ ರೈಲು ಸಂಖ್ಯೆ 09612 ನಾಳೆ ಸಂಚಾರ ನಡೆಸಬೇಕಾಗಿದ್ದು ಕೂಡ ರದ್ದಾಗಲಿದೆ.
ದಿಬ್ರುಗರ್-ಅಮೃತಸರ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಖ್ಯೆ 05211 ನಾಳೆ ಸಂಚರಿಸಬೇಕಾಗಿದ್ದು ರದ್ದಾಗಿದೆ. ಅಮೃತಸರ-ದಿಬ್ರುಗರ್ ವಿಶೇಷ ರೈಲು ಸಂಖ್ಯೆ 05212 ನಾಳೆ ಸಂಚಾರ ನಡೆಸಬೇಕಾಗಿದ್ದು ಸಹ ರದ್ದಾಗಿದೆ.
ಬಟಿಂಡಾ-ವಾರಣಾಸಿ-ಬಟಿಂಡಾ ಎಕ್ಸ್ ಪ್ರೆಸ್ ವಿಶೇಷ ರೈಲು ಕೂಡ ಮುಂದಿನ ಆದೇಶದವರೆಗೆ ಸಂಚಾರ ರದ್ದಾಗಿದೆ.