ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ!

ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಉತ್ತಮ ಸೇವೆ ನೀಡಿದ 10 ಪೊಲೀಸ್ ಠಾಣೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ.  ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಇಡೀ ದೇಶದಲ್ಲೇ ಉತ್ತಮ ಸೇವೆ ಒದಗಿಸುವ ಪೊಲೀಸ್ ಠಾಣೆ ಎಂಬ ಖ್ಯಾತಿ ಪಡೆದರೆ, ತೆಲಂಗಾಣದ ಜಮ್ಮಿಕುಂಟಾ ಪೊಲೀಸ್ ಠಾಣೆ 10ನೇ ಸ್ಥಾನದಲ್ಲಿದೆ.

Published: 03rd December 2020 08:08 PM  |   Last Updated: 03rd December 2020 08:08 PM   |  A+A-


Home_Ministry1

ಕೇಂದ್ರ ಗೃಹ ಸಚಿವಾಲಯ

Posted By : Nagaraja AB
Source : Online Desk

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಉತ್ತಮ ಸೇವೆ ನೀಡಿದ 10 ಪೊಲೀಸ್ ಠಾಣೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ.  ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಇಡೀ ದೇಶದಲ್ಲೇ ಉತ್ತಮ ಸೇವೆ ಒದಗಿಸುವ ಪೊಲೀಸ್ ಠಾಣೆ ಎಂಬ ಖ್ಯಾತಿ ಪಡೆದರೆ, ತೆಲಂಗಾಣದ ಜಮ್ಮಿಕುಂಟಾ ಪೊಲೀಸ್ ಠಾಣೆ 10ನೇ ಸ್ಥಾನದಲ್ಲಿದೆ.

ಆರೋಗ್ಯಕಾರಿ ಸ್ಪರ್ಧಿ ಮತ್ತು ಹೆಚ್ಚು ಪರಿಣಾಕಾರಿ ಕಾರ್ಯಚಟುವಟಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರತಿ ವರ್ಷ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಠಾಣೆಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡುತ್ತದೆ.

ದೇಶದ ಒಟ್ಟು 16,671 ಪೊಲೀಸ್ ಠಾಣೆಗಳ ಕಾರ್ಯಕ್ಷಮತೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಪೈಕಿ 10 ಅತ್ಯುತ್ತಮ ಪೊಲೀಸ್ ಠಾಣೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ ಟಾಪ್ 10 ಪೊಲೀಸ್ ಠಾಣೆಗಳ ಪಟ್ಟಿ ಇಂತಿದೆ.

* ಮಣಿಪುರ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ 
* ತಮಿಳುನಾಡಿನ ಸೇಲಂ ಜಿಲ್ಲೆಯ ಎಡಬ್ಲ್ಯೂಪಿಎಸ್- ಸುರಮಂಗಲಂ
* ಅರುಣಾಚಲ ಪ್ರದೇಶ ಚಾಂಗ್ಲಾಂಗ್ ಜಿಲ್ಲೆಯ  ಖರ್ಸಾಂಗ್
* ಛತ್ತೀಸ್ ಗಢದ ಬಯ್ಯಾ ಥಾನಾದ  ಜಿಲ್ಮಿಲಿ
* ಗೋವಾ ರಾಜ್ಯದ ಸಾಂಗುಮ್
*ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾಲಿಘಾಟ್
*ಸಿಕ್ಕಿಂನ ಪಾಕ್ಯಾಂಗ್
* ಉತ್ತರ ಪ್ರದೇಶ ರಾಜ್ಯ ಮೊರಾದಬಾದ್ ಜಿಲ್ಲೆಯ ಕಾಂತ್ 
* ದಾದ್ರಾ ಮತ್ತು ನಗರ್ ಹವೇಲಿಯ ಖಾನ್ವೆಲ್
* ತೆಲಂಗಾಣದ ಕರೀಂನಗರ ಜಿಲ್ಲೆಯ  ಜಮ್ಮಿಕುಂಟಾ

ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ 10 ಉತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಪೊಲೀಸ್ ಠಾಣೆಯೂ ಸ್ಥಾನಗಳಿಸಿಲ್ಲ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp