ಟಿಎಂಸಿ ಶಾಸಕನ ಹತ್ಯೆ ಪ್ರಕರಣ: ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಹೆಸರು! 

ಟಿಎಂಸಿ ನಾಯಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣದ ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮುಕುಲ್ ರಾಯ್ ಹೆಸರು ದಾಖಲಾಗಿದೆ.

Published: 05th December 2020 07:36 PM  |   Last Updated: 05th December 2020 07:36 PM   |  A+A-


Mukul Roy

ಟಿಎಂಸಿ ಶಾಸಕನ ಹತ್ಯೆ ಪ್ರಕರಣ: ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಹೆಸರು!

Posted By : Srinivas Rao BV
Source : The New Indian Express

ಕೋಲ್ಕತ್ತಾ: ಟಿಎಂಸಿ ನಾಯಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣದ ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮುಕುಲ್ ರಾಯ್ ಹೆಸರು ದಾಖಲಾಗಿದೆ.

ನದಿಯಾ ಜಿಲ್ಲೆಯ ನಾಯಕನ ಹತ್ಯೆಗೆ ಸಂಚು ರೂಪಿಸಿದ್ದವರ ಪೈಕಿ ರಾಯ್ ಅವರ ಹೆಸರನ್ನೂ ಆರೋಪ ಪಟ್ಟಿಯಲ್ಲಿ ತನಿಖಾ ಸಂಸ್ಥೆ ಸೇರಿಸಿದೆ. ರಾಣಾಘಾಟ್ ನ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರ ಹೆಸರನ್ನು ಈ ಹಿಂದೆ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯಲ್ಲಿ ಸಿಐಡಿ ದಾಖಲಿಸಿತ್ತು.

ಕಳೆದ ವರ್ಷ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಕೃಷ್ಣಗಂಜ್ ನ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ತನಿಖೆ ಪ್ರಗತಿಯಾದಂತೆ ಷಡ್ಯಂತ್ರ ರೂಪಿಸಿದವರ ಪಟ್ಟಿಯಲ್ಲಿ ರಾಯ್ ಅವರ ಹೆಸರೂ ಕೇಳಿಬಂದಿದ್ದರಿಂದ ಪೂರಕ ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp