ನಾಪತ್ತೆಯಾಗಿದ್ದ ಮಿಗ್ 29 ಪೈಲಟ್ ನಿಶಾಂತ್ ಸಿಂಗ್ ಮೃತದೇಹ 11 ದಿನದ ನಂತರ ಪತ್ತೆ

ನಾಪತ್ತೆಯಾದ ಮಿಗ್ 29 ಕೆ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.

Published: 07th December 2020 07:30 PM  |   Last Updated: 07th December 2020 07:30 PM   |  A+A-


Posted By : Raghavendra Adiga
Source : The New Indian Express

ನಾಪತ್ತೆಯಾದ ಮಿಗ್ 29ಕೆ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.

ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಗ್ -29 ಕೆ ತರಬೇತಿ ವಿಮಾನವು ನವೆಂಬರ್ 26ರಂದು ಅರಬ್ಬಿ ಸಮುದ್ರಕ್ಕೆ ಧುಮುಕಿದ ನಂತರ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದರು. ಘಟನೆಯಲ್ಲಿ ಓರ್ವ ಪೈಲಟ್‌ನನ್ನು ರಕ್ಷಿಸಿದ್ದು ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಇಂದು ಸಿಕ್ಕಿದೆ.

ಅಪಘಾತದ ನಂತರ ಒಂದು ಗಂಟೆಯ ನಂತರವೂ ಪೈಲಟ್‌ನನ್ನು ರಕ್ಷಿಸುವುದು ಕಷ್ಟವಾಗುತ್ತದೆ ಎಂದು ರಕ್ಷಣಾ ವಿಶ್ಲೇಷಕ ವೈಸ್ ಅಡ್ಮಿರಲ್(ನಿವೃತ್ತ) ಶೇಖರ್ ಸಿನ್ಹಾ) ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ ಹೇಳಿದ್ದರು.

ರಷ್ಯಾದ ಮೂಲದ ಅವಳಿ ಆಸನಗಳ ತರಬೇತಿನಿರತ ವಿಮಾನವು ದೇಶದ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಡೆಕ್‌ನಿಂದ ಹೊರಟ ನಂತರ ಸಮುದ್ರದಲ್ಲಿ ಮುಳುಗಿತ್ತು.

ಖೇದದ ಸಂಗತಿ ಎಂದರೆ ಮೃತ ನಿಶಾಂತ್ ಕಳೆದ ಮೇ ನಲ್ಲಿ ವಿವಾಹ ಮಾಡಿಕೊಂಡಿದ್ದರು.ಈ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಅವರು ಬರೆದ ಪತ್ರ ವೈರಲ್ ಆಗಿತ್ತು.

"ಇದು ನಿಶಾಂತ್ ಕುಟುಂಬ ಹಾಗೂ ನೌಕಾಪಡೆಗೆ ದೊಡ್ಡ ನಷ್ಟ. ಆರು ತಿಂಗಳ ಹಿಂದೆ ಸಿಡಿಆರ್ ನಿಶಾಂತ್ ಸಿಂಗ್ ಅವರನ್ನು ಮದುವೆಯಾದ ಮಹಿಳೆಗೆ ಇದು ತುಂಬಾ ದೊಡ್ಡ ದುಃಖಕರ ಸಂಗತಿಯಾಗಿದೆ. ಕುಟುಂಬವು ದೇಹವನ್ನು ಪಡೆದುಕೊಳ್ಳದಿರುವುದರಿಂದ  ಹಾಗೂ ಹಾಗೆ ಮೃತದೇಹ ಪಡೆದು ರೆ ಮತ್ತು ಕೊನೆಯ ವಿಧಿಗಳನ್ನು ನಿರ್ವಹಿಸದಹೊರತು ವ್ಯಕ್ತಿಯು ಜೀವಂತವಾಗಿರುತ್ತಾನೆ ಎಂಬ ದೀರ್ಘಕಾಲಿಕ ಭರವಸೆ ಹೊಂದಿರುವುದರಿಂದ  ಅವರ ಕುಟುಂಬಕ್ಕೆ ಇದು ಅತ್ಯಂತ ಖೇದಕರ ಸಂಗತಿ" ಎಂದು ಇನ್ನೊಬ್ಬ ನೌಕಾ ಯುದ್ಧ ಏವಿಯೇಟರ್ ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp