ಮುಂದಿನ ಕೆಲ ವರ್ಷಗಳಲ್ಲಿ ಭಾರತೀಯ ಆರ್ಥಿಕತೆ ಶ್ರೇಷ್ಠ ಮಟ್ಟಕ್ಕೆ ತಲುಪಲಿದೆ: ನೀತಿ ಆಯೋಗದ ಉಪಾಧ್ಯಕ್ಷ
ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಕಡಿಮೆಯಾಗುತ್ತಿದ್ದಂತೆ ಎಲ್ಲಾ ವಲಯಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಬಳಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆ ವಿಶ್ವದ ಶ್ರೇಷ್ಠ ಆರ್ಥಿಕತೆಯಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಹೇಳಿದ್ದಾರೆ.
Published: 07th December 2020 06:11 PM | Last Updated: 07th December 2020 06:17 PM | A+A A-

ರಾಜೀವ್ ಕುಮಾರ್
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಕಡಿಮೆಯಾಗುತ್ತಿದ್ದಂತೆ ಎಲ್ಲಾ ವಲಯಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಬಳಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಆರ್ಥಿಕತೆ ವಿಶ್ವದ ಶ್ರೇಷ್ಠ ಆರ್ಥಿಕತೆಯಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ 50ನೇ ವಸಂತದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಕೃಷಿ, ಆಧುನಿಕ ವಿಜ್ಙನ, ಸಾಂಪ್ರದಾಯಿಕ ಔಷಧಿ, ಹೊಸ ಶೈಕ್ಷಣಿಕ ನೀತಿ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ವಲಯ ಸೇರಿದಂತೆ ಎಲ್ಲಾ ವಲಯಗಳ ಅಭಿವೃದ್ಧಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಭಾರತ ವಿಶ್ವದ ಶ್ರೇಷ್ಠ ಮೂರು ಆರ್ಥಿಕತೆಯನ್ನು ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದರು.
ಈ ಕೋವಿಡ್ ಸಾಂಕ್ರಾಮಿಕ ಕಾರ್ಯನಿರ್ವಹಣೆಯ ವಿಧಾನಗಳನ್ನು ಬದಲಿಸಿದ್ದು, ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ವಿಶ್ವ ಚಲನೆಯಲ್ಲಿರಲು ನಾವು ಹೊಸ ಆರ್ಥಿಕ ವ್ಯವಸ್ಥೆಯನ್ನು ಹುಟ್ಟುಹಾಕುವ ಅನಿವಾರ್ಯತೆ ಇದೆ ಎಂದರು.
ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಸ್ಥಿತಿ ಚೇತರಿಕೆ ಕಾಣುತ್ತಿದೆ ಮತ್ತು ಮುಂದಿನ ಕೆಲ ತ್ರೈಮಾಸಿಕದಲ್ಲಿ ಅದು ಮತ್ತೆ ಪುಟಿದೇಳಲಿದೆ. ಮುಂದಿನ 20-30 ವರ್ಷಗಳಲ್ಲಿ ಸರಾಸರಿ ಶೇ.7ರಿಂದ 8ರಷ್ಟು ಹೆಚ್ಚಾಗಲಿದೆ ಮತ್ತು 2047ರ ವೇಳೆಗೆ ದೇಶ ಮೂರನೇ -ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 50 ವರ್ಷಗಳಲ್ಲಿ ಡಿಎಸ್ ಟಿ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಸಾಮರ್ಥ್ಯವನ್ನು ಹೆಚ್ಚಿಸಿದೆ. ವಿಶ್ವದ ವಿಜ್ಞಾನ ಪ್ರಕಟಣೆಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ, ಮತ್ತು ಡಿಎಸ್ಟಿ ಅದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ನಮ್ಮ ಬಜೆಟ್ ದ್ವಿಗುಣಗೊಂಡಿದೆ ಎಂದರು.
ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಯ ಭಾಗವಾಗಿರುವ ಎಂಟು ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ, ಭಾರತೀಯ ಹಿಮಾಲಯನ್ ಪ್ರದೇಶವನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಗುರಿಯನ್ನು ಹೊಂದಿರುವ ಏಕೈಕ ಸೈಟ್-ನಿರ್ದಿಷ್ಟ ಮಿಷನ್ ಎನ್ಎಂಎಸ್ ಎಚ್ಇ ಕೂಡ ಒಂದಾಗಿದೆ. ಈ ಮೂಲಕ ನಾವು ಹಿಮಾಲಯನ್ ಪ್ರದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 12 ರಲ್ಲಿ ಹವಾಮಾನ ಬದಲಾವಣೆ (ಸಿಸಿ) ಕೋಶಗಳನ್ನು ಸ್ಥಾಪಿಸಿದ್ದೇವೆ ಮತ್ತು ಶೀಘ್ರದಲ್ಲೇ ಲಡಾಕ್ ನಲ್ಲಿ 13 ನೇ ರಾಜ್ಯ ಸಿಸಿ ಸೆಲ್ ಅನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.