ಭಯೋತ್ಪಾದಕನನ್ನು ವಿವಾಹವಾಗಿದ್ದ ಪಿಒಕೆ ಮಹಿಳೆ ಜಮ್ಮು-ಕಾಶ್ಮೀರದ ಡಿಡಿಸಿ ಚುನಾವಣೆ ಅಭ್ಯರ್ಥಿ!

ಭಯೋತ್ಪಾದಕನನ್ನು ವಿವಾಹವಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರದ ಮಹಿಳೆ 2020 ರ ಜಮ್ಮು-ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. 
ಸುಮಿಯಾ ಸದಾಫ್
ಸುಮಿಯಾ ಸದಾಫ್

ಶ್ರೀನಗರ: ಭಯೋತ್ಪಾದಕನನ್ನು ವಿವಾಹವಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರದ ಮಹಿಳೆ 2020 ರ ಜಮ್ಮು-ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. 

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಡ್ರಾಗ್ ಮುಲ್ಲಾದಿಂದ ಡಿಸಿಸಿ ಚುನಾವಣೆಗೆ ಪಾಕಿಸ್ತಾನ ಆಕ್ರಮಿತ ಪ್ರದೇಶದ ಮುಜಾಫರಾಬದ್ ನ ಸುಮಿಯಾ ಸದಾಫ್ ಸ್ಪರ್ಧಿಸಿದ್ದಾರೆ.

ಈಕೆ ಪಿಒಕೆಯಿಂದ ಕಾಶ್ಮೀರಕ್ಕೆ ಬಂದು ದಶಕ ಕಳೆದಿದ್ದು, ಕುಪ್ವಾರ್ ಜಿಲ್ಲೆಯ ಬತಾರ್ಗಾಮ್ ನ ಸ್ಥಳೀಯ ಭಯೋತ್ಪಾದಕನನ್ನು ವಿವಾಹವಾಗಿದ್ದರು. ಈಕೆಯ ಪತಿ ಶಸ್ತ್ರಾಸ್ತ್ರ ತರಬೇತಿಗಾಗಿ ಎಲ್ಒಸಿ ದಾಟಿ ಆ ನಂತರ ಸರ್ಕಾರದ ಪುನರ್ವಸತಿ ಯೋಜನೆಯಡಿ ವಾಪಸ್ಸಾಗಿದ್ದರು.

2010 ರಲ್ಲಿ ಸರ್ಕಾರದ ಪುನರ್ವಸತಿ ನೀತಿಯಡಿ ನಾನು ಇಲ್ಲಿಗೆ ಬಂದೆ. ಆಗಿನಿಂದಲೂ ಇಲ್ಲೇ ಇದ್ದೇನೆ, ಶಾಂತಿ ಸಂದೇಶ ಹೊತ್ತು ಬಂದಿದ್ದು, ನಮಗೆ ದೇಶದಲ್ಲಿ ಶಾಂತಿ ಇರಬೇಕೆಂಬ ಬಯಕೆ ಇದೆ. ದೇಶಕ್ಕೆ ಅಭಿವೃದ್ಧಿ ಮುಖ್ಯವಾಗಿದ್ದು, ಅಭಿವೃದ್ಧಿಯೆಡೆಗೆ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಸುಮಿಯಾ ಸದಾಫ್

ಸುಮಿಯಾ ಸದಾಫ್ ಪಿಒಕೆಯಿಂದ ಬಂದು ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳೆಯೇನಲ್ಲ, 2018 ರಲ್ಲಿ ಇದೇ ರೀತಿ ಭಯೋತ್ಪಾದಕರನ್ನು ವಿವಾಹವಾಗಿದ್ದ ಇಬ್ಬರು ಮಹಿಳೆಯರು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com