ವಾಯುಸೇನೆಗೆ 'ಸಿಂಹಬಲ': ವಿಚಕ್ಷಣಾ ವಿಮಾನ ನಿರ್ಮಾಣಕ್ಕೆ 'ಡಿಆರ್ ಡಿಒ' ಮುಂದು!

ಭಾರತೀಯ ವಾಯುಸೇನೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸೇನೆಗಾಗಿ 6 ವಿಚಕ್ಷಣಾ ವಿಮಾನಗಳನ್ನು ನಿರ್ಮಾಣ ಮಾಡಲಿದೆ.
ವಿಚಕ್ಷಣ ವಿಮಾನ (ಸಂಗ್ರಹ ಚಿತ್ರ)
ವಿಚಕ್ಷಣ ವಿಮಾನ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ವಾಯುಸೇನೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಸೇನೆಗಾಗಿ 6 ವಿಚಕ್ಷಣಾ ವಿಮಾನಗಳನ್ನು ನಿರ್ಮಾಣ ಮಾಡಲಿದೆ.

ಅತ್ತ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇನೆಗಳು ಪ್ರಚೋದನೆ ನೀಡುತ್ತಿರುವ ಹೊತ್ತಿನಲ್ಲೇ ಭಾರತ ತನ್ನ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವತ್ತ ಸಾಗಿದೆ. ಈ ಹಿಂದೆ ದೇಶೀಯ ಯುದ್ಧ ನೌಕೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದ ಸೇನೆ, ಇದೀಗ ತನ್ನ ವಿಚಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ. 

ಹೌದು... ವಾಯುಸೇನೆಯ ಬಲ ಹೆಚ್ಚಿಸಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ವಾಯುಸೇನೆಗೆ ಆರು ವಿಚಕ್ಷಣಾ (ವಾಯುಗಾಮಿ ಆರಂಭಿಕ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ) ವಿಮಾನಗಳನ್ನು ತಯಾರಿಸಿ ಕೊಡಲಿದೆ. ಈ ಯೋಜನೆಗಾಗಿ ಡಿಆರ್ ಡಿಒ ಮತ್ತು  ವಾಯು ಸೇನೆ ಸುಮಾರು 10,500 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದು. ಎಇಯು ಮತ್ತು ಸಿ ಬ್ಲಾಕ್ 2  ಮಾದರಿಯ 6 ವಿಮಾನಗಳನ್ನು ತಯಾರಿಸಲು ಡಿಆರ್ ಡಿಒ ಮುಂದಾಗಿದೆ.

AEW ಮತ್ತು C ಬ್ಲಾಕ್ 2 ವಿಮಾನಗಳು ಸೇನೆಯಲ್ಲಿ ಹಾಲಿ ಇರುವ ನೆಟ್ರಾ ವಿಮಾನಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ಈ ವಿಮಾನದಲ್ಲಿ 360 ಡಿಗ್ರಿ ಸಾಮರ್ಥ್ಯದ ಅತ್ಯಾಧುನಿಕ ರಾಡಾರ್ ಇದ್ದು ಯಾವುದೇ ರೀತಿಯ ಅಪಾಯಗಳನ್ನು ಮೊದಲೇ ಗ್ರಹಿಸಿ ನಿಯಂತ್ರಣ ಕೊಠಡಿಗೆ  ಮಾಹಿತಿ ರವಾನಿಸುತ್ತದೆ.

ಇನ್ನು ನೂತನ ಯೋಜನೆಯೊಂದಿಗೆ ವಾಯುಸೇನೆ ಈ ಹಿಂದೆ ಉದ್ದೇಶಿಸಲಾಗಿದ್ದ ಯೂರೋಪಿಯನ್ ಮೂಲದ ಸಂಸ್ಥೆಯಿಂದ 6 ಏರ್ ಬಸ್ 330 ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಕೈ ಬಿಡುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com