ದೆಹಲಿ: ಪಿಎಂ-ಯುಡಿಎವೈ ಯೋಜನೆಯಡಿ ಈ ವರೆಗೂ 2,500 ಆಸ್ತಿ ಹಕ್ಕು ವಿತರಣೆ; ಅರಿವು ಮೂಡಿಸಲು ಮುಂದಾದ ಡಿಡಿಎ

ದೆಹಲಿಯ ಅನಧಿಕೃತ ವಸಾಹತುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಆಸ್ತಿ ಹಕ್ಕು ಪತ್ರ ವಿತರಣೆ ಮಾಡುವ ಕೇಂದ್ರ ಸರ್ಕಾರದ ಪಿಎಂ-ಯುಡಿಎವೈ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ.
ದೆಹಲಿ: ಪಿಎಂ-ಯುಡಿಎವೈ ಯೋಜನೆಯಡಿ ಈ ವರೆಗೂ 2,500 ಆಸ್ತಿ ಹಕ್ಕು ವಿತರಣೆ: ಅರಿವು ಮೂಡಿಸಲು ಮುಂದಾದ ಡಿಡಿಎ
ದೆಹಲಿ: ಪಿಎಂ-ಯುಡಿಎವೈ ಯೋಜನೆಯಡಿ ಈ ವರೆಗೂ 2,500 ಆಸ್ತಿ ಹಕ್ಕು ವಿತರಣೆ: ಅರಿವು ಮೂಡಿಸಲು ಮುಂದಾದ ಡಿಡಿಎ

ನವದೆಹಲಿ: ದೆಹಲಿಯ ಅನಧಿಕೃತ ವಸಾಹತುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಆಸ್ತಿ ಹಕ್ಕು ಪತ್ರ ವಿತರಣೆ ಮಾಡುವ ಕೇಂದ್ರ ಸರ್ಕಾರದ ಪಿಎಂ-ಯುಡಿಎವೈ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಜನರಿಗೆ ಅರಿವಿನ ಕೊರತೆಯ ಪರಿಣಾಮವಾಗಿ ಡಿ.2019 ವರೆಗೂ ಕೇವಲ 2,500 ಆಸ್ತಿಗಳಿಗೆ ಸಂಬಂಧಪಟ್ಟ ಹಕ್ಕು ಪತ್ರಗಳನ್ನಷ್ಟೇ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ವಿತರಣೆ ಮಾಡಿದೆ.

ಕೇಂದ್ರ ವಸತಿ, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ 1,225 ಹಕ್ಕು ವರ್ಗಾವಣೆ ಪತ್ರಗಳಿಗೆ ಆದೇಶ ಹೊರಡಿಸಲಾಗಿದ್ದು, ಡಿಸೆಂಬರ್ 11 ವರೆಗೆ 1,320 ಆಸ್ತಿಗಳಿಗೆ ದೃಢೀಕರಣವನ್ನು ನೀಡಲಾಗಿದೆ. ಈ ಪಿಎಂ-ಯುಡಿಎವೈ ನ ಅಡಿಯಲ್ಲಿ ಮಾಲಿಕತ್ವದ ಹಕ್ಕನ್ನು ಕೇಳಿ ಅರ್ಜಿ ಸಲ್ಲಿಸಿದವರ ಪೈಕಿ ಶೇ.0.7 ರಷ್ಟು ಮಂದಿಗೆ ಮಾತ್ರವೇ ಈ ಪತ್ರಗಳು ದೊರೆತಿದ್ದು ಇನ್ನೂ ಹಲವಾರು ಅರ್ಜಿದಾರರಿಗೆ ಪತ್ರಗಳು ತಲುಪಬೇಕಿದೆ.

ಕಳೆದ ವರ್ಷ ಡಿ.16 ರಂದು ಪ್ರಾರಂಭವಾಗಿದ್ದ ಡಿಡಿಎ ಪೋರ್ಟಲ್ ನಲ್ಲಿ ಈ ವರೆಗೂ 3.6 ಲಕ್ಷ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 46,457 ಮಂದಿಯಷ್ಟೇ ವಾಸ್ತವದಲ್ಲಿ ದಾಖಲೆ ಸಹಿತ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 4,600 ಅರ್ಜಿಗಳು ತಿರಸ್ಕೃತಗೊಂಡಿವೆ.

ಪಿಎಂ-ಯುಡಿಎವೈ ಯೋಜನೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಜನರು ಮುಂದಾಗದೇ ಇರುವ ಕಾರಣಕ್ಕಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಡಿಡಿಎ ಮುಂದಾಗಿದ್ದು, ಇದಕ್ಕಾಗಿ ಕೌನ್ಸಿಲರ್ ಗಳಿಗೆ ಜವಾಬ್ದಾರಿ ನೀಡಲಾಗುತ್ತದೆ.

ಪಿಎಂ-ಯುಡಿಎವೈ ಕುರಿತ ಜಾಗೃತಿ ಕ್ಯಾಂಪ್ ಗಳು ನಿವಾಸಿ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ)ಗಳ ಜೊತೆಯಲ್ಲಿ ಸಂವಹನ ಕಾರ್ಯಕ್ರಮಗಳನ್ನು ಏರ್ಪಡಿಸುವುದಾಗಿ ಡಿಡಿಎ ಉಪಾಧ್ಯಕ್ಷ ಅನುರಾಗ್ ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com