ಡಿಸೆಂಬರ್ 29ರಂದು ಕೇಂದ್ರದೊಂದಿಗೆ ಮತ್ತೆ ರೈತ ನಾಯಕರ ಮಾತುಕತೆ

ಪ್ರತಿಭಟನಾ ನಿರತ ರೈತ ಸಂಘಟನೆಗಳ ನಾಯಕರು ಇದೇ 29(ಮಂಗಳವಾರ) ರಂದು ಕೇಂದ್ರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ತಿಳಿಸಿದ್ದಾರೆ.
ರೈತ ಮುಖಂಡರು
ರೈತ ಮುಖಂಡರು

ನವದೆಹಲಿ: ಪ್ರತಿಭಟನಾ ನಿರತ ರೈತ ಸಂಘಟನೆಗಳ ನಾಯಕರು ಇದೇ 29(ಮಂಗಳವಾರ) ರಂದು ಕೇಂದ್ರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ತಿಳಿಸಿದ್ದಾರೆ.

ನಾವು ಡಿಸೆಂಬರ್ 29 ರಂದು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದೇವೆ ಎಂದು ಟಿಕೈತ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿರುವ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ್ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೊಸ ಸುಧಾರಣೆಗಳನ್ನು ರದ್ದುಗೊಳಿಸುವ ಬಗ್ಗೆ ಸಭೆಯಲ್ಲಿ ತಮ್ಮ ಕಾರ್ಯಸೂಚಿಯನ್ನ ಕೇಂದ್ರೀಕರಿಸಲಾಗುವುದು ಎಂದೂ ಕಾರ್ಮಿಕ ಸಂಘಟನೆಗಳು ಹೇಳಿವೆ. 'ಮಾತುಕತೆಯ ಕಾರ್ಯಸೂಚಿಯ ಮೊದಲ ಎರಡು ಅಂಶಗಳು, ಎಂಎಸ್ ಪಿ (ಕನಿಷ್ಠ ಬೆಂಬಲ ಬೆಲೆ) ಮೇಲೆ ಕಾನೂನು ಗ್ಯಾರಂಟಿಯನ್ನ ಒದಗಿಸುವ ಮೂರು ಕೃಷಿ ಕಾನೂನುಗಳನ್ನ ಮತ್ತು ಕಾರ್ಯ ವಿಧಾನವನ್ನೂ ರದ್ದುಗೊಳಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎಂದೂ ಹೇಳಲಾಗಿದೆ.

ಕೇಂದ್ರ ಸರ್ಕಾರ ಕಳೆದ ಗುರುವಾರ, ತಾನು ಎಲ್ಲಾ ಸಮಸ್ಯೆಗಳ ಕುರಿತು ಮುಕ್ತ ಮಾತುಕತೆಗೆ ಸಿದ್ಧವಿದ್ದು, ಅದಕ್ಕೆ ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸುವಂತೆ ರೈತ ಮುಖಂಡರಿಗೆ ಪತ್ರ ಬರೆದಿತ್ತು. ಅದರಂತೆ ಈಗ ರೈತ ಮುಖಂಡರು ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com