ಬಿಜೆಪಿ ಸೇರ್ಪಡೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದು ಹೀಗೆ...

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿರುವಾಗ ಇದೇ ಮೊದಲ ಬಾರಿ ಗಂಗೂಲಿ ಈ ಕುರಿತಂತೆ ಮಾತನಾಡಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿರುವಾಗ ಇದೇ ಮೊದಲ ಬಾರಿ ಗಂಗೂಲಿ ಈ ಕುರಿತಂತೆ ಮಾತನಾಡಿದ್ದಾರೆ.

ತಮ್ಮ ರಾಜಕೀಯ ಪ್ರವೇಶದ ಸಂಬಂಧ ಮೊದಲ ಬಾರಿಗೆ ಮೌನ ಮುರಿದ ಗಂಗೂಲಿ ತಮ್ಮ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲ ಧಂಕರ್ ಅವರ ಭೇಟಿಯ ಕುರಿತಂತೆ  "ಅದೊಂದು ಸೌಜನ್ಯದ ಭೇಟಿ ಮಾತ್ರವೇ ಆಗಿತ್ತು" ಎಂದು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಂಗೂಲಿ 'ರಾಜ್ಯಪಾಲರು ನಿಮ್ಮನ್ನು ಭೇಟಿ ಮಾಡಲು ಬಯಸಿದರೆ, ನೀವು ಅವರನ್ನು ಭೇಟಿ ಮಾಡಬೇಕು. ಅದಕ್ಕಾಗಿ ನನ್ನ ಭೇಟಿಯನ್ನು ಸಹ ಹಾಗೆಯೇ ನೋಡಬೇಕು.’ ಎಂದಿದ್ದಾರೆ. ಈ ಮೂಲಕ ಗಂಗೂಲಿ ಅಥವಾ ಅವರ ಕುಟುಂಬದ ಯಾರಾದರೂ ಬಿಜೆಪಿಗೆ ಸೇರುವವರಿದ್ದಾರೆ ಎನ್ನುವುದನ್ನು ಅವರು ತಳ್ಳಿ ಹಾಕಿದರು.

ನಿನ್ನೆ (ಭಾನುವಾರ) ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿ ಆಗಿದ್ದರು. ಗಂಗೂಲಿ ಮತ್ತು ಧಂಕರ್ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದರು ಗಂಗೂಲಿ-ರಾಜ್ಯಪಾಲರ ಈ ಭೇಟಿ "ದಾದಾ"ರಾಜಕೀಯ ಜೀವನ ಪ್ರಾರಂಭದ ಬಗೆಗಿನ ಊಹಾಪೋಹಗಳು ಸಾಕಷ್ಟು ಪ್ರಮಾಣದಲ್ಲಿ ಹರಡಲು ಕಾರಣವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com