ಕೇರಳ: ಕೇಂದ್ರ ಕೃಷಿ ಕಾಯ್ದೆ ವಿರುದ್ಧ ನಿರ್ಣಯಕ್ಕೆ ಬಿಜೆಪಿ ಶಾಸಕನ ಬೆಂಬಲ!

ಕೇರಳದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಕೈಗೊಂಡ ನಿರ್ಣಯಕ್ಕೆ ಏಕೈಕ ಬಿಜೆಪಿ ಶಾಸಕ ಬೆಂಬಲ ವ್ಯಕ್ತಪಡಿಸಿದ್ದಾರೆ. 

Published: 31st December 2020 04:08 PM  |   Last Updated: 31st December 2020 04:46 PM   |  A+A-


O.Rajagopal

ಒ.ರಾಜಗೋಪಾಲ್

Posted By : Srinivas Rao BV
Source : PTI

ತಿರುವನಂತಪುರಂ: ಕೇರಳದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಕೈಗೊಂಡ ನಿರ್ಣಯಕ್ಕೆ ಏಕೈಕ ಬಿಜೆಪಿ ಶಾಸಕ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಹಿಂದೆಂದೂ ಆಗದ ರೀತಿಯಲ್ಲಿ, ಕೇರಳ ವಿಧಾನಸಭೆಯಲ್ಲಿರುವ ಬಿಜೆಪಿಯ ಏಕೈಕ ಸದಸ್ಯ ಒ ರಾಜಗೋಪಾಲ್ ಆಡಳಿತ ಪಕ್ಷದ ನಿರ್ಣಯವನ್ನು ಬೆಂಬಲಿಸಿದ್ದಾರೆ. 

ಕೇರಳದ ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒ.ರಾಜಗೋಪಾಲ್, ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು, ವಿಧಾನಸಭೆಯಲ್ಲಿ ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ, ನಿರ್ಣಯಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳಲ್ಲಿ ಭಿನ್ನಾಭಿಪ್ರಾಯಗಳಿತ್ತು.  ನಿರ್ಣಯವನ್ನು ನಾನು ಸಂಪೂರ್ಣವಾಗಿ ಬೆಂಬಲಿಸಿದ್ದೆನೆ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಅಭಿಪ್ರಾಯಪಟ್ಟಿರುವ ಒ.ರಾಜಗೋಪಾಲ್, ವಿಧಾನಸಭೆಯ ಒಮ್ಮತದ ನಿರ್ಣಯವನ್ನು ತಾವು ಒಪ್ಪಿರುವುದಾಗಿ ತಿಳಿಸಿದ್ದು ಇದನ್ನು ಪ್ರಜಾಪ್ರಭುತ್ವದ ಚೈತನ್ಯ ಎಂದೂ ಹೇಳಿದ್ದಾರೆ. ಇದು ಪಕ್ಷದ ವಿರುದ್ಧದ ನಿಲುವಲ್ಲವೇ ಎಂಬ ಪ್ರಶ್ನೆಗೂ ಉತ್ತರಿಸಿರುವ ರಾಜಗೋಪಾಲ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಒಮ್ಮತದ ಪ್ರಕಾರ ನಡೆಯಬೇಕೆಂದು ಹೇಳಿದ್ದಾರೆ. 

ವಿಧಾನಸಭೆಯಲ್ಲಿ ಕಾಯ್ದೆಗಳ ಬಗ್ಗೆ ಮಾತನಾಡಿದ ರಾಜಗೋಪಾಲ್, ಕೇಂದ್ರ ಸರ್ಕಾರದ ಕಾಯ್ದೆಗಳು ಮಧ್ಯವರ್ತಿಗಳನ್ನು ಬದಿಗೆ ಇಟ್ಟು ರೈತರ ಹಿತಾಸಕ್ತಿಯನ್ನು ಕಾಪಾಡಲಿದೆ ಎಂದು ಕಾಯ್ದೆಯ ಪರ ಮಾತನಾಡಿದ್ದರು. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp