ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ

ಚೀನಾದಲ್ಲಿ ಕೊರೋನಾ ವೈರಸ್  ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.
ಚೆನ್ನೈ ಯುವತಿ ವೇಲಂ
ಚೆನ್ನೈ ಯುವತಿ ವೇಲಂ

ಚೆನ್ನೈ: ಚೀನಾದಲ್ಲಿ ಕೊರೋನಾ ವೈರಸ್  ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿ ಎಂ. ವೇಲಂ ಚೀನಾದ ತಿಯಾಜಿನ್ ನಿಂದ ಸಿಂಗಾಪುರ ಮಾರ್ಗವಾಗಿ ಭಾರತಕ್ಕೆ ಏಕಾಂಗಿಯಾಗಿ ವಿಮಾನದಲ್ಲಿ ಆಗಮಿಸಿದ್ದಾರೆ.

ಚೀನಾದ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಮಾಡುತ್ತಿದ್ದ ವೇಲಂ, ಕೊರೋನಾ ವೈರಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸೇವೆಯಿಂದ ತೀವ್ರ ಒತ್ತಡಕ್ಕೊಳಗಾಗಿ ಭಾರತಕ್ಕೆ ವಾಪಾಸ್ ಆಗಿದ್ದಾರೆ.

ಕೊರೋನಾ ವೈರಸ್ ನಿಂದ ಕಾಯಿಲೆ ಹರಡುವ ಭೀತಿಯಲ್ಲಿ ಚೀನಾ ಹಾಗೂ ಭಾರತ ನಡುವಣ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವೇಲಂ ತವರಿಗೆ ಮರಳಿದ ಕೊನೆಯ ಭಾರತೀಯರಾಗಿದ್ದಾರೆ. 

ಅಂತಿಮ ವರ್ಷದ ಎಂಬಿಬಿಎಸ್ ಪದವಿ ಮಾಡುತ್ತಿದ್ದ ವೇಲಂ, ಖಾಲಿ ವಿಮಾನದಲ್ಲಿ ಏಕಾಂಗಿಯಾಗಿ ಚೆನ್ನೈಗೆ ಆಗಮಿಸಿದ್ದಾರೆ.  ಮನೆಗೆ ಬರುತ್ತಿದ್ದಂತೆ ಅವರ ತಂದೆ ಮುತ್ತು ಸಂತೋಷಗೊಂಡಿದ್ದಾರೆ. ಎಲ್ಲಾ ವಿಮಾನಗಳು ಸೇವೆಯನ್ನು ಸ್ಥಗಿತಗೊಳಿಸಿರುವ ಸಂದರ್ಭದಲ್ಲಿ ತವರಿಗೆ ಮರಳಿದ ವೇಲಮ್ ಅದೃಷ್ಟವಂತೆ ಎಂದು ಹೇಳಿದ್ದಾರೆ. ವೈದ್ಯಕೀಯ ತಪಾಸಣೆಗೊಳಗಾಗುವುದಾಗಿ ವೇಲಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com