ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್ 20 ಅಲ್ಟ್ರಾ  ವಿಶೇಷತೆಗಳೇನು ಗೊತ್ತೇ?

ಸ್ಯಾನ್ ಫ್ರಾನ್ಸಿಸ್ಕೊ: ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್ 20 ಸರಣಿಯ ಮೊಬೈಲ್ ಬಿಡುಗಡೆಗೆ ಸಜ್ಜುಗೊಂಡಿದೆ. 

ಫೆ.11 ರಂದು ಸ್ಯಾನ್ ಫ್ರಾನ್ಸಿಸ್ಕೋ  ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಫೋನ್ ಬಿಡುಗಡೆಯಾಗಲಿದ್ದು, 16 ಜಿಬಿ ಆರ್.ಎ.ಎಂ ಹೊಂದಿರಲಿದೆ. 

ಗ್ಯಾಲೆಕ್ಸಿ ಎಸ್ 20 ಅಲ್ಟ್ರಾ 5 ಜಿ ಫೋನ್ ಆಗಿದ್ದು, 108 ಮೆಗಾಪಿಕ್ಸಲ್ ಕ್ಯಾಮರಾ, 40 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರವನ್ನು ಹೊಂದಿರಲಿದ್ದು100x ಡಿಜಿಟಲ್ ಝೂಮ್ ಸೌಲಭ್ಯ ಕೂಡ ಇರಲಿದೆ. 

ಹೈ-ಡೆಫನಿಷನ್ ಲೈವ್ ವಿಡಿಯೋ, ಹೈ-ಎಂಡ್ ಕ್ಲೌಡ್ ಗೇಮಿಂಗ್ XR 5ಜಿಯ ಪ್ರಮುಖ ಬಳಕೆಯ ಆಯ್ಕೆಗಳಾಗಿದ್ದು, 5ಜಿ  ಅಪ್ಲಿಕೇಷನ್ ಗಳಿಗೆ ಪೂರಕವಾಗುವಂತೆ 16 ಜಿಬಿ ಹೈ ಆರ್.ಎ.ಎಂ ಸಾಮರ್ಥ್ಯ ಈ ಮೊಬೈಲ್ ನಲ್ಲಿ ಇರಲಿದೆ. ಗ್ಯಾಲಕ್ಸಿ ಎಸ್ 20 6.2 ಇಂಚಿನ ಪರದೆ ಹೊಂದಿದ್ದರೆ ಎಸ್ 20+ 6.7, ಎಸ್ 20 ಅಲ್ಟ್ರಾ 6.9 ಇಂಚಿನ ಪರದೆ ಹೊಂದಿರಲಿದೆ. ಹೊಸ ಮೊಬೈಲ್ ನ ಬೆಲೆ 1,000 ಅಮೆರಿಕನ್ ಡಾಲರ್ (71,434.09 ರೂಪಾಯಿ) ನಷ್ಟಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com