ರಾಜ್ಯಸಭೆಯಲ್ಲಿ ಮೋದಿ ಭಾಷಣ: ಪದವೊಂದನ್ನು ಕಡತದಿಂದ ತೆಗೆದು ಹಾಕಲು ನಿರ್ದೇಶಿಸಿದ ಸಭಾಪತಿ

ಅಪರೂಪದ ವಿದ್ಯಮಾನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪದವೊಂದನ್ನು ಕಡತದಿಂದ ತೆಗೆದು ಹಾಕಲಾಗಿದೆ. 

Published: 08th February 2020 01:10 AM  |   Last Updated: 08th February 2020 01:33 AM   |  A+A-


pm_modi1

ಪ್ರಧಾನಿ ನರೇಂದ್ರ ಮೋದಿ

Posted By : Nagaraja AB
Source : Online Desk

ನವದೆಹಲಿ:ಅಪರೂಪದ ವಿದ್ಯಮಾನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪದವೊಂದನ್ನು ಕಡತದಿಂದ ತೆಗೆದು ಹಾಕಲಾಗಿದೆ. 

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿದ ಪದವೊಂದನ್ನು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಕಡತದಿಂದ ತೆಗೆದು ಹಾಕಿದ್ದಾರೆ.

ಫೆಬ್ರವರಿ 6ರಂದು ಸಂಜೆ 6 -20 ಮತ್ತು 6-30ರಲ್ಲಿನ  ರಾಜ್ಯಸಭಾ ಪ್ರಕ್ರಿಯೆಯ ನಿರ್ದಿಷ್ಠ ಭಾಗವನ್ನು ತೆಗೆದುಹಾಕುವಂತೆ ಸಭಾಪತಿ ನಿರ್ದೇಶಿಸಿದ್ದಾರೆ ಎಂದು ರಾಜ್ಯಸಭಾ ಕಾರ್ಯದರ್ಶಿ ಹೇಳಿದ್ದಾರೆ.

ಪ್ರತಿದಿನ ಕಲಾಪ ಮುಗಿದ ಬಳಿಕ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಯಾವುದಾದರೂ ಪದ ಸದನಕ್ಕೆ ಹೊಂದಿಕೆಯಾಗುವುದಿಲ್ಲ ಎನ್ನುವುದು ಮನವರಿಕೆಯಾದರೆ ತೆಗೆಸಿ ಹಾಕುತ್ತಾರೆ. ಹಿಂದೆ ಹಲವಾರು ಸಂದರ್ಭಗಳಲ್ಲಿ ಇದು ನಡೆದಿದೆ. ಆದರೆ ಪ್ರಧಾನಿ ಮೋದಿಯವರು ಆಡಿದ ಪದವನ್ನೇ ತೆಗೆಸಿ ಹಾಕಿರುವ ಕೆಲವೇ ಕೆಲವು ದೃಷ್ಟಾಂತಗಳಲ್ಲಿ ಇದೂ ಒಂದು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp