ದೆಹಲಿ ಮತದಾರರ ತೀರ್ಪನ್ನು ಬಿಜೆಪಿ ಗೌರವಿಸಲಿದೆ: ಜೆಪಿ ನಡ್ಡಾ

ದೆಹಲಿಯ ಮತದಾರರು ನೀಡಿದ ತೀರ್ಪನ್ನು ಬಿಜೆಪಿ ಗೌರವಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.

Published: 11th February 2020 07:55 PM  |   Last Updated: 11th February 2020 07:55 PM   |  A+A-


BJP committed to provide clean administration in Karnataka, says J P Nadda

ಜೆಪಿ ನಡ್ಡಾ

Posted By : Lingaraj Badiger
Source : UNI

ನವದೆಹಲಿ: ದೆಹಲಿಯ ಮತದಾರರು ನೀಡಿದ ತೀರ್ಪನ್ನು ಬಿಜೆಪಿ ಗೌರವಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ವಿಜಯಕ್ಕಾಗಿ ದಣಿವರಿಯದೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ  ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯನ್ನು ಅಭಿವೃದ್ಧಿಪಡಿಸಲಿದೆ ಎಂಬ ನಂಬಿಕೆಯೊಂದಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಜನರು ಮತ್ತೊಮ್ಮೆ ಚುನಾಯಿಸಿದ್ದಾರೆ ಎಂದು ಹೇಳಿದರು.

ದೆಹಲಿ ಜನರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ಬಿಜೆಪಿ ನಿಭಾಯಿಸಲಿದೆ ಎಂದರು.

ದೆಹಲಿ ಅಭಿವೃದ್ದಿಯ ಕೆಲಸ ಮುಂದುವರಿಸಲಿದೆ ಎಂಬ ಭರವಸೆಯೊಂದಿಗೆ ಕೇಜ್ರಿವಾಲ್ ಹಾಗೂ ಅವರ ತಂಡವನ್ನು ಅಭಿನಂಧಿಸುವುದಾಗಿ ಜೆ.ಪಿ. ನಡ್ಡಾ ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp