ನಮ್ಮ ಸೋಲಿನ ಬಗ್ಗೆ ವಿಮರ್ಶಿಸದೆ ಆಪ್ ಗೆಲುವನ್ನೇಕೆ ಸಂಭ್ರಮಿಸುತ್ತೀರಿ?: ಚಿದಂಬರಂ ವಿರುದ್ಧ ಶರ್ಮಿಷ್ಠ ಮುಖರ್ಜಿ ಕಿಡಿ 

ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಈ ಬಾರಿ ಕೂಡ ಕಾಂಗ್ರೆಸ್ ನದ್ದು ಶೂನ್ಯ ಸಂಪಾದನೆ. 

Published: 12th February 2020 10:39 AM  |   Last Updated: 12th February 2020 12:49 PM   |  A+A-


Sharmishtha Mukherjee

ಶರ್ಮಿಷ್ಠ ಮುಖರ್ಜಿ

Posted By : Sumana Upadhyaya
Source : ANI

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಈ ಬಾರಿ ಕೂಡ ಕಾಂಗ್ರೆಸ್ ನದ್ದು ಶೂನ್ಯ ಸಂಪಾದನೆ. 


ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆಮ್ ಆದ್ಮಿ ಪಾರ್ಟಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿರುವುದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿಗೆ ಸಿಟ್ಟು ತರಿಸಿದೆ.


ನಿನ್ನೆಯಷ್ಟೇ ಅವರು ಕಾಂಗ್ರೆಸ್ ನ ತೀರಾ ಕಳಪೆ ಸಾಧನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇನ್ನಾದರೂ ಪಕ್ಷ ಎಚ್ಚೆತ್ತುಕೊಳ್ಳಬೇಕು ಎಂದಿದ್ದರು. ಇದೀಗ ಚಿದಂಬರಂ ಅವರ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


ನಿನ್ನೆ ಆಪ್ ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿದ್ದ ಚಿದಂಬರಂ, ಬಿಜೆಪಿಯ ಧ್ರುವೀಕರಣ, ವಿಭಜನೆಯ ಮತ್ತು ಅಪಾಯಕಾರಿ ಅಜೆಂಡಾಗಳನ್ನು ಸೋಲಿಸಲು ದೆಹಲಿ ಜನತೆ ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಆಪ್ ಗೆದ್ದಿದೆ, ನಿಷ್ಕರುಣಿಗಳು, ಬಡಾಯಿ ಕೊಚ್ಚಿಕೊಳ್ಳುವವರು ಸೋತಿದ್ದಾರೆ ಎಂದು ಹೇಳಿದ್ದರು.


ಇದಕ್ಕೆ ಅವರದೇ ಪಕ್ಷದ ನಾಯಕಿ ಶರ್ಮಿಷ್ಠ ಮುಖರ್ಜಿ, ನಿಮ್ಮ ಮೇಲೆ ಗೌರವ ಇಟ್ಟುಕೊಂಡು ಕೇಳುತ್ತಿದ್ದೇನೆ ಸರ್, ರಾಜ್ಯದ ಪ್ರಾದೇಶಿಕ ಪಕ್ಷದ ಮುಂದೆ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹೊರಗುತ್ತಿಗೆ ಕೆಲಸ ನೀಡಿತ್ತೇ? ಇಲ್ಲದಿದ್ದರೆ ನೀವು ನಮ್ಮ ಪಕ್ಷದ ಸೋಲನ್ನು ಪರಾಮರ್ಶಿಸದೆ ಆಪ್ ನ ಗೆಲುವನ್ನೇಕೆ ಸಂಭ್ರಮಿಸುತ್ತೀರಿ ಎಂದು ಕೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp