ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಎನ್ ಕೌಂಟರ್: ಪೊಲೀಸರಿಂದ ಇಬ್ಬರು ಕ್ರಿಮಿನಲ್ ಗಳ ಹತ್ಯೆ 

ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳಾದ ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂಬುವವರನ್ನು ಕೊಂದು ಹಾಕಿದ್ದಾರೆ.

Published: 17th February 2020 08:21 AM  |   Last Updated: 17th February 2020 08:21 AM   |  A+A-


Police at encounter place

ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ

Posted By : Sumana Upadhyaya
Source : ANI

ನವದೆಹಲಿ: ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳಾದ ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂಬುವವರನ್ನು ಕೊಂದು ಹಾಕಿದ್ದಾರೆ.


ಹಲವು ಕೇಸುಗಳಲ್ಲಿ ಪೊಲೀಸರ ಸೆರೆಗೆ ಸಿಗಬೇಕಾಗಿದ್ದ ಈ ಇಬ್ಬರು ಕ್ರಿಮಿನಲ್ ಗಳು ಇತ್ತೀಚೆಗಷ್ಟೇ ಕರವಾಲ್ ನಗರ್ ಕೊಲೆ ಕೇಸಿನಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು. 


ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ದೆಹಲಿಯ ಪುಲ್ ಪ್ರಹ್ಲಾದ್ ಪುರ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಪೊಲೀಸರು ಆರೋಪಿಗಳನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp