ಟಿಕ್ ಟಾಕ್ ವಿಡಿಯೋ ಮಾಡುವಾಗ ಎಡವಟ್ಟು: ರೈಲಿನಿಂದ ಬಿದ್ದ ಯುವಕ, ಭಯಾನಕ ವಿಡಿಯೋ!

ಟಿಕ್ ಟಾಕ್ ವಿಡಿಯೋ ಮಾಡುವಾಗ ಯುವಕನೊಬ್ಬ ರೈಲಿನಿಂದ ಬಿದ್ದಿರುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನೋರ್ವ ರೈಲಿನಿಂದ ಕೆಳಗೆ ಓಡುವ ದೃಶ್ಯವನ್ನು ರೈಲಿ

Published: 18th February 2020 03:58 PM  |   Last Updated: 18th February 2020 03:58 PM   |  A+A-


Incident Image

ಪ್ರತ್ಯಕ್ಷ ದೃಶ್ಯ

Posted By : Vishwanath S
Source : Online Desk

ಟಿಕ್ ಟಾಕ್ ವಿಡಿಯೋ ಮಾಡುವಾಗ ಯುವಕನೊಬ್ಬ ರೈಲಿನಿಂದ ಬಿದ್ದಿರುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನೋರ್ವ ರೈಲಿನಿಂದ ಕೆಳಗೆ ಓಡುವ ದೃಶ್ಯವನ್ನು ರೈಲಿನ ಒಳಗಡೆ ಕುಳಿತ ಮತ್ತೋರ್ವ ಯುವಕ ಸೆರೆಹಿಡಿಯಲು ಮುಂದಾಗಿದ್ದ. ಈ ವೇಳೆ ಯುವಕ ಚಲಿಸುತ್ತಿದ್ದ ರೈಲಿನ ಕಂಬಿಯನ್ನು ಹಿಡಿದುಕೊಂಡು ಓಡಲು ಮುಂದಾಗಿದ್ದನು. ಆದರೆ ಅದೃಷ್ಟ ಕೈಕೊಟ್ಟಿತ್ತು. 

ಯುವಕ ಓಡುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ತಲೆ ಮತ್ತು ದೇಹಕ್ಕೆ ರೈಲಿನ ಕಂಬಿಗಳು ಬಡಿದಿವೆ. ಅದೃಷ್ಟವಶಾತ್ ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಜೀವಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಶೇರ್ ಮಾಡಿದ್ದು ಯಾರೇ ಆಗಲಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುವ ಕೆಲಸಗಳನ್ನು ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp