ಕಾರ್ಯಾಚರಣೆ ಆರಂಭಿಸಿದ ಚಿನೂಕ್ ಹೆಲಿಕಾಪ್ಟರ್: ಇದರ ವಿಶೇಷತೆಗಳೇನು? 

ಅಮೆರಿಕ ಮೂಲದ ಭಾರತ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಲಡಾಖ್ ವಲಯದ ಸಿಯಾಚಿನ್ ಹಿಮಚ್ಛಾದಿತ ಪ್ರದೇಶ ಸೇರಿದಂತೆ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು ಮಿಲಿಟರಿ ಸಾಧನಗಳನ್ನು ಎತ್ತರದ ಮಟ್ಟಕ್ಕೆ ಸಾಗಿಸುತ್ತಿವೆ.
ಚಿನೂಕ್ ಹೆಲಿಕಾಪ್ಟರ್
ಚಿನೂಕ್ ಹೆಲಿಕಾಪ್ಟರ್

ನವದೆಹಲಿ:ಅಮೆರಿಕ ಮೂಲದ ಭಾರತ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಲಡಾಖ್ ವಲಯದ ಸಿಯಾಚಿನ್ ಹಿಮಚ್ಛಾದಿತ ಪ್ರದೇಶ ಸೇರಿದಂತೆ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು ಮಿಲಿಟರಿ ಸಾಧನಗಳನ್ನು ಎತ್ತರದ ಮಟ್ಟಕ್ಕೆ ಸಾಗಿಸುತ್ತಿವೆ.


ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈ ಹೆಲಿಕಾಪ್ಟರ್ ನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿತ್ತು. ಚಿನೂಕ್ ಹೆಲಿಕಾಪ್ಟರ್ ನ್ನು ಅತಿ ಭಾರದ ಮಿಲಿಟರಿ ಉಪಕರಣಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿ ಭಾಗದಲ್ಲಿ ಎತ್ತರದ ಪ್ರದೇಶಕ್ಕೆ ಕೊಂಡೊಯ್ಯಲು ಬಳಸಲಾಗುತ್ತದೆ. ಸಿಯಾಚಿನ್ ನಂತಹ ಅತಿ ಎತ್ತರ ಪ್ರದೇಶಗಳಲ್ಲಿ ಸೇವಾ ನಿರತರಾಗಿರುವ ಯೋಧರಿಗೆ ಈ ಮಿಲಿಟರಿ ಸಾಧನಗಳಿಂದ ನೆರವಾಗಲಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.


ಚಿನೂಕ್ ಅತಿ ಭಾರವನ್ನು ಹೊತ್ತೊಯ್ಯುವ, ಟಂಡೆಮ್ ರೋಟರ್ ಹೆಲಿಕಾಪ್ಟರ್ ಆಗಿದ್ದು, ಇದು 19 ದೇಶಗಳ ಸಶಸ್ತ್ರ ಪಡೆಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದೆ. ಕೇವಲ ಮಿಲಿಟರಿ ಸಾಧನಗಳನ್ನು ಒಯ್ಯುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತದೆ. ಭಾರತೀಯ ವಾಯುಪಡೆಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ(ಹೆಚ್ ಎಆರ್ ಡಿ) ಕೆಲಸಗಳಿಗೆ ಸಹ ಇದರಿಂದ ನೆರವಾಗುತ್ತದೆ ಎಂದು ವಾಯುಪಡೆ ತಿಳಿಸಿದೆ.


ಕಳೆದ ವರ್ಷ ಭಾರತೀಯ ವಾಯುಪಡೆಗೆ ಚಿನೂಕ್ ಮತ್ತು ಅಪಚೆಯಂತಹ ದೊಡ್ಡ ಹೆಲಿಕಾಪ್ಟರ್ ಸೇರ್ಪಡೆ,ಉಪಗ್ರಹ ವಿರೋಧಿ ಶಸ್ತ್ರಾಸ್ತ್ರಗಳ ಪರೀಕ್ಷೆ, ರಹಸ್ಯ ಜಲಾಂತರ್ಗಾಮಿ ನೌಕೆ ಮತ್ತು ಕಾಲಾಳುಪಡೆಯ ಆಧುನೀಕರಣದಂತಹ ಕಾರ್ಯಗಳು ನಡೆದಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com