ಅಮೆರಿಕಾ ಅಧ್ಯಕ್ಷ ಟ್ರಂಪ್‌ಗೆ ಖಾದಿ ಕುರ್ತಾ ಗಿಫ್ಟ್ ನೀಡಿದ ತಮಿಳುನಾಡಿನ ವ್ಯಕ್ತಿ!

 ಫೆಬ್ರವರಿ 24 ಮತ್ತು 25ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಇದ್ದು ಈ ವೇಳೆ ಇಡೀ ಜಗತ್ತು ಭಾರತದತ್ತ ಮುಖ ಮಾಡಲಿದೆ. ರಾಜಕೀಯ, ಆರ್ಥಿಕ ವಿಶ್ಲೇಷಕರು ಈ ಭೇಟಿಇಯ ಬಗೆಗೆ ನಾನಾ ಬಗೆಯ ಅಭಿಪ್ರಾಯ ಮಂಡಿಸುತಿದ್ದಾರೆ. ಆದರೆ ಇದೆಲ್ಲದರ ನಡುವೆ ತಮಿಳುನಾಡಿನ ಪುಟ್ಟ ಹಳ್ಳಿಯೊಂದರ ವಯೋವೃದ್ದರು ತಾವು ಟ್ರಂಪ್ ಗಾಗಿ ಖಾದಿ ವಸ್ತ್ರವನ್ನು ನೇಯ್ದು ಕೊಡುವ ಮೂಲಕ
ವಿ ಎಸ್ ವಿಶ್ವನಾಥನ್
ವಿ ಎಸ್ ವಿಶ್ವನಾಥನ್

ಕೊಯಮತ್ತೂರ್: ಫೆಬ್ರವರಿ 24 ಮತ್ತು 25ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಇದ್ದು ಈ ವೇಳೆ ಇಡೀ ಜಗತ್ತು ಭಾರತದತ್ತ ಮುಖ ಮಾಡಲಿದೆ. ರಾಜಕೀಯ, ಆರ್ಥಿಕ ವಿಶ್ಲೇಷಕರು ಈ ಭೇಟಿಇಯ ಬಗೆಗೆ ನಾನಾ ಬಗೆಯ ಅಭಿಪ್ರಾಯ ಮಂಡಿಸುತಿದ್ದಾರೆ. ಆದರೆ ಇದೆಲ್ಲದರ ನಡುವೆ ತಮಿಳುನಾಡಿನ ಪುಟ್ಟ ಹಳ್ಳಿಯೊಂದರ ವಯೋವೃದ್ದರು ತಾವು ಟ್ರಂಪ್ ಗಾಗಿ ಖಾದಿ ವಸ್ತ್ರವನ್ನು ನೇಯ್ದು ಕೊಡುವ ಮೂಲಕ ಟ್ರಂಪ್ ಹಾಗೂ ಇಡೀ ಜಗತ್ತಿಗೆ ಗಾಂಧೀಜಿಯ ಖಾದಿ ವಸ್ತ್ರದ ಮಹಿಮೆ ಸಾರಲು ಹೊರಟಿದ್ದಾರೆ.

ಹೌದು! ತಮಿಳುನಾಡು ಪ್ಲ್ಲಾಚಿ ತಾಲೂಕಿನ ವೆಟ್ಟೈಕರನ್‌ಪುದೂರ್ ನಿವಾಸಿ ನೇಕಾರರಾದ 84 ವರ್ಷದ  ವಿ ಎಸ್ ವಿಶ್ವನಾಥನ್ ಡೊನಾಲ್ಡ್ ಟ್ರಂಪ್‌ಗೆ ಖಾದಿ ಕುರ್ತಾ ನೇಯ್ದು ಉಡುಗೊರೆಯಾಗಿ ನೀಡಲಿದ್ದಾರೆ. ಈ ಮೂಲಕ ಖಾದಿ ವಸ್ತ್ರವನ್ನು ಬಳಸಲು ಭಾರತೀಯರನ್ನು ಉತ್ತೇಜಿಸುವ ಉದ್ದೇಶ ಅವರದ್ದಾಗಿದೆ. ಹಾಗೆಯೇ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ದೃಷ್ಟಿಯನ್ನು ಪಸರಿಸುವುದು ಇದರ ಹಿಂದಿನ ಮೂಲ ಉದ್ದೇಶವಾಗಿದೆ. 

ವಿಶ್ವನಾಥನ್ ಇದಾಗಲೇ ತಾವು ನೇಯ್ದ ಈ ಖಾದಿ ಕುರ್ತಾವನ್ನು ಧಾನ ಮಂತ್ರಿ ಕಚೇರಿಗೆ ಪಾರ್ಸೆಲ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ದೆಹಲಿ ಭೇಟಿಯ ವೇಳೆ ಅವರಿಗಿದನ್ನು ಕೊಡಲಿದ್ದಾರೆ.

ಅದೇನೇ ಇದ್ದರೂ, ವಿಶ್ವನಾಥನ್ ಈ ಹಿಂದೆ ಕೂಡ ಕೊಯಮತ್ತೂರಿಗೆ ಭೇಟಿ ಕೊಟ್ಟಿದ್ದ ಗಣ್ಯ ವ್ಯಕ್ತಿಗಳಿಗೆ  ಖಾದಿ ಕುರ್ತಾವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಇವರಿಂದ ಖದಿ ಕುರ್ತಾ ಉಡುಗೊರೆ ಪಡೆದವರಲ್ಲಿ ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ ಮತ್ತು ಆರ್.ವೆಂಕಟರಾಮನ್, ಹಿರಿಯ ತಮಿಳು ನಟ ಶಿವಾಜಿ ಗಣೇಶನ್ ಸಹ ಸೇರಿದ್ದಾರೆ. ಅಲ್ಲದೆ ಇದೇ ವಿಶ್ವನಾಥನ್ ಕೆಲ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೂ ಸಹ ಖಾದಿ ಕುರ್ತಾವನ್ನು ಉಡುಗೊರೆ ಕೊಟ್ಟಿದ್ದಿದೆ.

 “ರಾಜಕೀಯ ನಾಯಕರು ಕೊಯಮತ್ತೂರಿಗೆ ಭೇಟಿ ನೀಡಿದಾಗಲೆಲ್ಲಾ ನಾನು ಅವರಿಗೆ ಖಾದಿ ಕುರ್ತಾವನ್ನು ನೀಡುತ್ತೇನೆ.ಖಾದಿ ಬಟ್ಟೆಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಈ ಕಾರ್ಯದ ಉದ್ದೇಶ" ವಿಶ್ವನಾಥನ್ ಹೇಳಿದ್ದಾರೆ.

1969 ರಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ  ವಿ.ವಿ.ಗಿರಿ ಅವರಿಗೆ ವಿಶ್ವನಾಥನ್ ಮೊದಲ ಬಾರಿಗೆ ಖಾದಿ ಕುರ್ತಾವನ್ನು ನೀಡಿದ್ದರು. "ಆ ನಂತರದ ದಿನಗಳಲ್ಲಿ ಯಾರೆಲ್ಲಾ ಪ್ರಸಿದ್ದ ನಾಯಕರು ಕೊಯಮತ್ತೂರಿಗೆ ಬಂದರೆ ಅವರಿಗೆ ಖಾದಿ ಕುರ್ತಾ ನೀಡುವ ಅಭ್ಯಾಸ ರೂಢಿಸಿಕೊಂಡೆ" ಅವರು ಹೇಳೀದ್ದಾರೆ.

ವ್ಯಕ್ತಿಯ ಎತ್ತರವನ್ನು ಲೆಕ್ಕಹಾಕುವ ಮೂಲಕ, ಕುರ್ತಾ ನೇಯ್ಗೆ ಮಾಡುಉವುದು ನನಗೆ ಸಾಧ್ಯವಿದೆ ಎಂದ ವಿಶ್ವನಾಥನ್ ಡೊನಾಲ್ಡ್ ಟ್ರಂಪ್‌ಗೆ ಅವರು 42 ಇಂಚಿನ ಗಾತ್ರದ ಕುರ್ತಾವನ್ನು ನೇಯ್ಗೆ ಮಾಡಿರುವುದಾಗಿ ಹೇಳಿದ್ದಾರೆ. ವಿಶ್ವನಾಥನ್ ಪ್ರಕಾರ, ಕೈಮಗ್ಗ ಕ್ಷೇತ್ರವು ತನ್ನ ಹಿಂದಿನ ಶೈನ್ ಅನ್ನು ಕಳೆದುಕೊಂಡಿದೆ. ಜನರು ಪಾಶ್ಚಿಮಾತ್ಯ ಬಟ್ಟೆಗಳನ್ನು ಇಷ್ಟಪಡುತ್ತಾರೆ ಆದರೆ ಖಾದಿ ಬಟ್ಟೆಗಳನ್ನು ಇಷ್ಟಪಡುವುದಿಲ್ಲ 

84 ವರ್ಷದ ವಿಶ್ವನಾಥನ್ ತಮ್ಮ ಊರಿನ  ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಉಚಿತ ಟೈಲರಿಂಗ್ ತರಗತಿಗಳನ್ನು ಸಹ ನಡೆಸಿಕೊಡುತ್ತಾರೆ."ಖಾದಿ ಕುರ್ತಾವನ್ನು ಡೊನಾಲ್ಡ್ ಟ್ರಂಪ್‌ಗೆ ನೀಡಲಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ಆದರೆ, ಅದು ಹಾಗಾಗದಿದ್ದರೂ ಸಹ ನಾನು ನಿರಾಶನಾಗಲಾರೆ." ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com