ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ಆಸಿಡ್ ದಾಳಿ ನಾಲ್ವರಿಗೆ ಗಾಯ

10 ನೇತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಆಸಿಡ್ ಎರಚಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ  ಹಿಮಾಚಲ ಪ್ರದೇಶದ ಹಮೀರ ಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಮೀರ್ ಪುರ: 10 ನೇತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಆಸಿಡ್ ಎರಚಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ  ಹಿಮಾಚಲ ಪ್ರದೇಶದ ಹಮೀರ ಪುರದಲ್ಲಿ ನಡೆದಿದೆ.

ಉತ್ಪುರದಲ್ಲಿರುವ ಶಾಲೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. 10 ನೇ ತರಗತಿಯ  ಮೂವರು ವಿದ್ಯಾರ್ಥಿನಿಯರು ಹಾಗೂ 9ನೇ ತರಗತಿಯ ಅಪ್ರಾಪ್ತನೊಬ್ಬ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ಷಿಕ ಪರೀಕ್ಷೆಯ ಪ್ರಾಕ್ಟಿಕಲ್ಸ್ ಇದ್ದ ಕಾರಣ ನಿನ್ನೆ ಸಂಜೆಯವರೆಗೂ ಶಾಲೆ ತೆರೆದಿತ್ತು.  ಶಾಲೆಯು ಇನ್ನೇನು ಮುಚ್ಚಬೇಕು ಎನ್ನುವ ಸಮಯದಲ್ಲಿ ವಿಜ್ಞಾನ ಪ್ರಯೋಗಾಲಯದಿಂದ ಬಂದ ಆತನ ಸೀನಿಯರ್  ಆಸಿಡ್ ಎರಚಿದ ಎಂದು ಗಾಯಗೊಂಡಿರುವ 9ನೇ ತರಗತಿ ವಿದ್ಯಾರ್ಥಿ ತಿಳಸಿದ್ದಾನೆ.

ಘಟನೆ ನಡೆದ ಸಮಯದಲ್ಲಿ ತಾನು ಮೂರು ಹುಡುಗಿಯರೊಂದಿಗೆ ಕ್ಲಾಸ್ ರೂಮಿನ ಹೊರಗೆ ಕುಳಿತಿದ್ದೆ, ಆಗ ಆ ಹುಡುಗಿಯರ ಮುಖದ ಮೇಲೆ ಕೂಡ ಬಿದ್ದಿದೆ ಎಂದು ಅವರು ಹೇಳಿದರು. ಈ ಸಂಬಂಧಪ್ರಕರಣ ದಾಖಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com