ಭಾರತ-ಪಾಕ್ ಸಮ್ಮತಿಸಿದರೆ ಕಾಶ್ಮೀರಕ್ಕಾಗಿ ಮಧ್ಯಸ್ಥಿಕೆಗೆ ಸಿದ್ದ-ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಮ್ಮತಿಸಿದರೆ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಟ್ರಂಪ್ ಇಂದು ದೆಹಲಿಯಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾತುಗಳನ್ನಾಡಿದ್ದಾರೆ.

Published: 25th February 2020 07:26 PM  |   Last Updated: 25th February 2020 07:27 PM   |  A+A-


ಡೊನಾಲ್ಡ್ ಟ್ರಂಪ್

Posted By : Raghavendra Adiga
Source : PTI

ನವದೆಹಲಿ: ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಮ್ಮತಿಸಿದರೆ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಟ್ರಂಪ್ ಇಂದು ದೆಹಲಿಯಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾತುಗಳನ್ನಾಡಿದ್ದಾರೆ.

"ನಾನು ಮತ್ತು ಪ್ರಧಾನಿ ಮೋದಿ  ಭಯೋತ್ಪಾದನೆ ಬಗ್ಗೆ ಚರ್ಚಿಸಿದ್ದು  ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದವಿದ್ದೇನೆ"

"ಪಿಎಂ ಮೋದಿ ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸುತ್ತಿದ್ದಾರೆ.ಅವರು ತುಂಬಾ ಧಾರ್ಮಿಕ ಮನುಷ್ಯ ಹಾಗೂ ಶಾಂತ ಸ್ವಭಾವದ ವ್ಯಕ್ತಿ. ಆದರೆ ತುಂಬಾ ಬಲಶಾಲಿ ಮತ್ತು ಅವರು ದೇಶದ ರಕ್ಷಣೆ ವಿಚಾರವನ್ನು ಬಲವಾಗಿ ಬೆಂಬಲಿಸುತ್ತಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನನಗೆ ಉತ್ತಮಸಂಬಂಧವಿದೆ. ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ ಇಬ್ಬರು ನಾಯಕರು(ಪಿಎಂ ಮೋದಿ ಮತ್ತು ಪಾಕ್ ಪಿಎಂ ಖಾನ್)ಅವರೊಂದಿಗಿನ ನನ್ನ ಸಂಬಂಧವು ತುಂಬಾ ಉತ್ತಮವಾಗಿದೆ. ಅವರು (ಪಾಕಿಸ್ತಾನ) ಕಾಶ್ಮೀರಕ್ಕಾಗಿ ಕೇಳುತ್ತಾರೆ.. ಕಾಶ್ಮೀರವು ದೀರ್ಘಕಾಲದ ಸಮಸ್ಯೆಯಾಗಿದ್ದು ಇದನ್ನು ಬಗೆಹರಿಸಲು ನಾನು ಮಧ್ಯಸ್ಥಗಾರನಾಗಲು ಸಿದ್ದ" ಟ್ರಂಪ್ ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯ: ನಾವು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದೇವೆ  ಎಂದ ಟ್ರಂಪ್ ಪ್ರಧಾನಿ ಮೋದಿ ಅವರು ಧಾರ್ಮಿಕ ಸ್ವಾತಂತ್ರ್ಯವನ್ನು ನಂಬುತ್ತಾರೆ. ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ಶ್ರಮಿಸುತ್ತಿದೆ.ಧಾರ್ಮಿಕ ವಿಚಾರವಾಗಿ ನಡೆಯುವ ದಾಳಿಗಳು ಭಾರತದ ವೈಯುಕ್ತಿಕ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ಸಿಎಎ: ಪೌರತ್ವ ತಿದ್ದುಪಡಿ ಮಸೂದೆ ಕುರಿತು ನಾನು ಚರ್ಚಿಸಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. "ಪೌರತ್ವ ತಿದ್ದುಪಡಿ ಮಸೂದೆಯನ್ನು ಚರ್ಚಿಸಲು ನಾನು ಬಯಸುವುದಿಲ್ಲ. ನಾನು ಅದನ್ನು ಭಾರತಕ್ಕೆ ಬಿಡುತ್ತೇನೆ.ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ತಮ್ಮ ಜನರಿಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆಶಿಸುತ್ತೇವೆ" 

ತಾಲಿಬಾನ್ ಶಾಂತಿ ಒಪ್ಪಂದ: ನಾವು ತಾಲಿಬಾನ್ ಜೊತೆ ಶಾಂತಿ ಒಪ್ಪಂದಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದ ಟ್ರಂಪ್ "ಈ ಶಾಂತಿ ಒಪ್ಪಂದ ಆಗುವುದನ್ನು ಭಾರತವೂ ನೋಡಬಯಸಿದೆ. ನನ್ನ ಬಗೆಗೆ ವಿರೋಧವಿರುವ . 99.9% ಜನರು ಕೂಡ ಈ ಶಾಂತಿ ಒಪ್ಪಂದದ ಕುರಿತು ನನ್ನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ" ಅಮೆರಿಕಾ ಅಧ್ಯಕ್ಷರು ಹೇಳೀದರು.

ಇಸ್ಲಾಮಿಕ್ ಮೂಲಭೂತವಾದ: ಇದುವರೆಗೆ ನನಗಿಂತ ಹೆಚ್ಚಿನದನ್ನು ಯಾರೂ ಮಾಡಿಲ್ಲ ಎನ್ನುವುದು ನನ್ನ ಭಾವನೆ.ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ಭಯೋತ್ಪಾದನೆಗೆ ಒತ್ತುಕೊಟ್ಟಿದ್ದವು. ನಾನು ಆದೇಶಗಳನ್ನು ನೀಡಿದೆ. ಈಗ ನಾವು ಬಾಗ್ದಾದಿ ಮತ್ತು ಸೊಲೈಮಾನಿ ಮತ್ತು ಬಿನ್ ಲಾಡೆನ್ ಮತ್ತು ಅಲ್ ಖೈದಾವನ್ನು ಇನ್ನಿಲ್ಲದಂತೆ ಬಗ್ಗುಬಡಿದಿದ್ದೇವೆ. . ರಷ್ಯಾ, ಇರಾನ್, ಇರಾಕ್ ಕೂಡ ಅದೇ ರೀತಿ ಮಾಡಬೇಕು. ನಾವು ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಮ್ಮ ಸಣ್ಣ ತುಕಡಿಗಳಿದೆ.  ತೈಲ ಬಾವಿಗಳನ್ನು ಕಾಪಾಡಲು ಸಿರಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಇದ್ದಾರೆ ಎಂದು ಟ್ರಂಪ್ ವಿವರಿಸಿದರು.

ದಾರ್ಮಿಕ ಹಿಂಸೆ ಹಾಗೂ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವ ಶಾಸನಗಳು: ನಾವು ಮುಸ್ಲಿಮರ ಕುರಿತು ಚರ್ಚಿಸಿದ್ದೇವೆ. ಕ್ರಿಶ್ಚಿಯನ್ನರ ಬಗೆಗೆ ಸಹ ಮಾತನಾಡಿದ್ದೇವೆ. ನಾವು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದೇವೆ ನಾನು ಅಪರಾಧ, ಹಿಂಸೆಯನ್ನು ವಿರೋಧಿಸುತ್ತೇನೆ. ಮೋದಿ ನನಗೆ ಅತ್ಯಂತ ಸೂಕ್ತವೆನ್ನಿಸುವ ಉತ್ತರ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp