ವೈರಲ್ ವಿಡಿಯೋ ದೆಹಲಿಯದ್ದಲ್ಲ, ಪುಣೆಯಲ್ಲಿ ನಡೆದ ಹಳೆಯ ಘಟನೆ: ಕೇಂದ್ರ ಸರ್ಕಾರ!

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಲ್ಲ.. ಸುಳ್ಳು.. ಅದು ಅಸಲಿಗೆ ದೆಹಲಿಯದ್ದೇ ಅಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

Published: 26th February 2020 01:19 PM  |   Last Updated: 26th February 2020 01:19 PM   |  A+A-


bus driver being attacked is NOT related to Delhi violence

ವೈರಲ್ ವಿಡಿಯೋ

Posted By : Srinivasamurthy VN
Source : Online Desk

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಲ್ಲ.. ಸುಳ್ಳು.. ಅದು ಅಸಲಿಗೆ ದೆಹಲಿಯದ್ದೇ ಅಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ಗುಂಪೊಂದು ಸರ್ಕಾರಿ ಬಸ್ ಚಾಲಕನ ಮೇಲೆ ಏಕಾಏಕಿ ಹಲ್ಲೆ ಮಾಡುತ್ತಿರುವ ವಿಡಿಯೋ ಇದಾಗಿದ್ದು, ದುಷ್ಕರ್ಮಿಗಳು ಇದನ್ನು ದೆಹಲಿ ಹಿಂಸಾಚಾರದ ವಿಡಿಯೋ ಎಂದು ಸುದ್ದಿ ಹಬ್ಬಿಸಿ ಶೇರ್ ಮಾಡುತ್ತಿದ್ದಾರೆ. ಆದರೆ ಇದೀಗ ಈ ವಿಡಿಯೋಗೆ ಸಂಬಂಧಿಸಿದಂತೆ ಸ್ವತಃ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದ್ದು, ಈ ವಿಡಿಯೋ ದೆಹಲಿಯದಲ್ಲ. ಪುಣೆಯಲ್ಲಿ ನಡೆದ ಹಳೆಯ ಘಟನೆಯಾಗಿದೆ ಎಂದು ಹೇಳಿದೆ.

ಅಲ್ಲದೆ ನೈಜ ದೃಶ್ಯಾವಳಿಯ ಲಿಂಕ್ ಅನ್ನು ಕೂಡ ಸಚಿವಾಲಯ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಅಲ್ಲದೆ ಸುಳ್ಳು ಸುದ್ದಿಗಳ ಕುರಿತು ಎಚ್ಚರಿಕೆಯಿಂದ ಇರಿ.. ಶಾಂತಿ ಕಾಪಾಡಿ ಎಂದು ಪ್ರಜೆಗಳಿಗೆ ಮನವಿ ಮಾಡಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp