ರಾಜಸ್ಥಾನದಲ್ಲಿ ಭಿಕರ ದುರಂತ: ಸೇತುವೆಯಿಂದ ನದಿಗೆ ಉರುಳಿದ ಬಸ್, 24 ಮಂದಿ ಜಲಸಮಾಧಿ

ಮದುವೆ ಮುಗಿಸಿ ವಾಪಾಸಾಗುವಾಗ ಖಾಸಗಿ ಬಸ್ ಒಂದು ಸೇತುವೆಯಿಂದ ನದಿಗೆ ಉರುಳಿಬಿದ್ದು 24 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿ ಬಳಿ ನಡೆದಿದೆ. 
ರಾಜಸ್ಥಾನದಲ್ಲಿ ಭಿಕರ ದುರಂತ: ಸೇತುವೆಯಿಂದ ನದಿಗೆ ಉರುಳಿದ ಬಸ್, 24 ಮಂದಿ ಜಲಸಮಾಧಿ
ರಾಜಸ್ಥಾನದಲ್ಲಿ ಭಿಕರ ದುರಂತ: ಸೇತುವೆಯಿಂದ ನದಿಗೆ ಉರುಳಿದ ಬಸ್, 24 ಮಂದಿ ಜಲಸಮಾಧಿ

ಜೈಪುರ್(ರಾಜಸ್ಥಾನ): ಮದುವೆ ಮುಗಿಸಿ ವಾಪಾಸಾಗುವಾಗ ಖಾಸಗಿ ಬಸ್ ಒಂದು ಸೇತುವೆಯಿಂದ ನದಿಗೆ ಉರುಳಿಬಿದ್ದು 24 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿ ಬಳಿ ನಡೆದಿದೆ.

ಮದುವೆ ಕಾರ್ಯಕ್ರಮ ಮುಗಿಸಿ  ಕೋಟಾದಿಂದ ಸವಾಯಿ ಮಾಧೋಪುರದತ್ತ ಧಾವಿಸುತ್ತಿದ್ದ ಬಸ್ ಕೇಶೋರೈಪಟಾನ್ ಪ್ರದೇಶದ ಪಪ್ಡಿ ಗ್ರಾಮದ ಬಳಿ ಸೇತುವೆಯೊಂದರಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ.ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಬಸ್ಸು ನದಿಗೆ ಉರುಳಿ ಬಿದ್ದು  ಅಪಾರ ಸಾವು ನೋವಿಗೆ ಕಾರಣವಾಗಿದೆ.

ಘಟನೆಯಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ."ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲಾ ಮದುವೆ ಮುಗಿಸಿ ವಾಪಾಸಾಗುತ್ತಿದ್ದರು.  ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ಬರಲಾಗುತ್ತಿತ್ತು.ಆಗ ಚಾಲಕನ ನಿಯಂತ್ರಣ ತಪ್ಪಿದೆ. ಸೇತುವೆಗೆ ತಡೆಗೋಡೆ ಇರದ ಕಾರಣ ಅನಾಹುತವಾಗಿದೆ"  ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಮಾಹಿತಿ ಬಂದ ತಕ್ಷಣ ಪೋಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. 

ಘಟನೆ ಸಂಬಂಧ ಮಾಹಿತಿ ಪಡೆದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ “ಬುಂಡಿಯಲ್ಲಿ ಸಂಭವಿಸಿದ ದುರಂತದ ಬಗ್ಗೆ ನನಗೆ ಅತೀವ ದುಃಖವಾಗಿದೆ. ಬಸ್ಸು ನದಿಗೆ ಉರುಳಿದ ಪರಿಣಾಮ 24 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ನನ್ನ ಸಂತಾಪವಿದೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಲಲೆಂದು ಣಾನು ಆಶಿಸುತ್ತೇನೆ" ಎಂದು ಟ್ವಿಟ್ಟರ್ ನಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com