ಅರವಿಂದ ಸಾವಂತ್
ಅರವಿಂದ ಸಾವಂತ್

ಲಾಭದಾಯಕ ಹುದ್ದೆ: ಶಿವಸೇನೆಯ ಅರವಿಂದ ಸಾವಂತ್, ರವೀಂದ್ರ ವೈಕರ್ ಸಚಿವಸ್ಥಾನಕ್ಕೆ ರಾಜೀನಾಮೆ

ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ  ಅರವಿಂದ ಸಾವಂತ್ ಮತ್ತು ರವೀಂದ್ರ ವೈಕರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನಿಡಿದ್ದಾರೆ. ಲಾಭದಾಯಕ ಹುದ್ದೆ ವಿವಾದದಲ್ಲಿ ಸಿಲುಕಿದ್ದ ಇವರ ವಿರುದ್ಧ ವಿಧಾನಸಭೆಯಭಾರತೀಯ ಜನತಾ ಪಕ್ಷ  (ಬಿಜೆಪಿ) ಮುಗಿಬೀಳಲಿದೆ ಎಂದರಿತ ನಾಯಕರು ವಿಪಕ್ಷಗಳ ಟೀಕೆಗೆ ತುತ್ತಾಗುವ ಮುನ್ನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ  ಅರವಿಂದ ಸಾವಂತ್ ಮತ್ತು ರವೀಂದ್ರ ವೈಕರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನಿಡಿದ್ದಾರೆ. ಲಾಭದಾಯಕ ಹುದ್ದೆ ವಿವಾದದಲ್ಲಿ ಸಿಲುಕಿದ್ದ ಇವರ ವಿರುದ್ಧ ವಿಧಾನಸಭೆಯಭಾರತೀಯ ಜನತಾ ಪಕ್ಷ  (ಬಿಜೆಪಿ) ಮುಗಿಬೀಳಲಿದೆ ಎಂದರಿತ ನಾಯಕರು ವಿಪಕ್ಷಗಳ ಟೀಕೆಗೆ ತುತ್ತಾಗುವ ಮುನ್ನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಧಿವೇಶನದಲ್ಲಿ ತಮ್ಮ ವಿರುದ್ಧ ಬಿಜೆಪಿ ಆರೋಪಿಸುವುದು ಖಚಿತವೆಂದು ತಿಳಿದಿದ್ದ ಇಬ್ಬರೂ ನಾಯಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಅವರಿಗೆ ರಾಜೀನಾಮೆ ರವಾನಿಸಿದ್ದಾರೆ ಹಾಗೆಯೇ ದನ್ನು ಮಂಗಳವಾರ ಅಂಗೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಈ ವಾರ ಈ ವಿಷಯವನ್ನು ಎತ್ತಲು ಬಿಜೆಪಿ ಯೋಜಿಸಿತ್ತು. ನಾವು ಯಾವುದೇ ವಿವಾದವನ್ನು ಬಯಸಲಿಲ್ಲ ಆದ್ದರಿಂದ ಠಾಕ್ರೆ ಉಭಯ ನಾಯಕರ ರಾಜೀನಾಮೆಯನ್ನು ಮುಂಚಿತವಾಗಿ ತೆಗೆದುಕೊಂಡಿದ್ದರು." ಹೆಸರು ಹೇಳಲು ಬಯಸದ ಶಿವಸೇನೆ ಮುಖಂಡರು ವಿವರಿಸಿದ್ದಾರೆ.

ಅರವಿಂದ ಸಾವಂತ್ ಅವರನ್ನು ಫೆಬ್ರವರಿ 14 ರಂದುಮಹಾರಾಷ್ಟ್ರ ರಾಜ್ಯ ಸಂಸದೀಯ ಸಮನ್ವಯ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅರವಿಂದ ಸಾವಂತ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಶಿವಸೇನೆ ಶಾಸಕ ರವೀಂದ್ರ ವೈಕರ್ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯ ಸಂಯೋಜಕರಾಗಿ ನೇಮಿಸಲಾಗಿದ್ದು  ಅವರಿಗೆ ಕ್ಯಾಬಿನೆಟ್ ಮಿನಿಸ್ಟರ್ ಹುದ್ದೆಯನ್ನೂ ನೀಡಲಾಗಿತ್ತು.

ಶಿವಸೇನೆ ಮುಖಂಡ ಮತ್ತು ಸಂಸದ ಅರವಿಂದ ಸಾವಂತ್ ಅವರು, “ಹಿಂದಿನ ಬಿಜೆಪಿ ಆಳ್ವಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಈ ರೀತಿಯ ಕ್ಯಾಬಿನೆಟ್ ಸ್ಥಾನಮಾನವನ್ನು ನೀಡಲಾಗಿತ್ತು. ಆದರೆ ಐದೀಗ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ" ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com