ದೆಹಲಿ ಹಿಂಸಾಚಾರ: ಕೆಲವೆಡೆ ಸಿಬಿಎಸ್ಇ ಪರೀಕ್ಷೆ ಮುಂದೂಡಿಕೆ

ಈಶಾನ್ಯ ದೆಹಲಿ ಹಿಂಸಾಚಾರ ಸಿಬಿಎಸ್​ಇ ಪರೀಕ್ಷೆಗಳ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಫೆ 27 ರಂದು ನಿಗದಿಯಾಗಿದ್ದ ಸಿಬಿಎಸ್​ಇ 12ನೇ ತರಗತಿಯ ಇಂಗ್ಲಿಷ್ ಪರೀಕ್ಷೆಗಳನ್ನು ದೆಹಲಿಯ 80 ಕೇಂದ್ರಗಳಲ್ಲಿ ಮುಂದೂಡಲಾಗಿದೆ.
ದೆಹಲಿ ಹಿಂಸಾಚಾರ: ಕೆಲವೆಡೆ ಸಿಬಿಎಸ್ಇ ಪರೀಕ್ಷೆ ಮುಂದೂಡಿಕೆ
ದೆಹಲಿ ಹಿಂಸಾಚಾರ: ಕೆಲವೆಡೆ ಸಿಬಿಎಸ್ಇ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಸಿಬಿಎಸ್​ಇ ಪರೀಕ್ಷೆಗಳ ಮೇಲೆ ಕೂಡ ಪರಿಣಾಮ ಬೀರುತ್ತಿದ್ದು ಫೆ 27 ರಂದು ನಿಗದಿಯಾಗಿದ್ದ ಸಿಬಿಎಸ್​ಇ 12ನೇ ತರಗತಿಯ ಇಂಗ್ಲಿಷ್ ಪರೀಕ್ಷೆಗಳನ್ನು ದೆಹಲಿಯ 80 ಕೇಂದ್ರಗಳಲ್ಲಿ ಮುಂದೂಡಲಾಗಿದೆ.

ಕಳೆದ ಮೂರು ದಿನಗಳಿಂದಲೂ ಈಶಾನ್ಯ ದೆಹಲಿ ಹಾಗೂ ಪೂರ್ವ ದೆಹಲಿಯ ಕೆಲವು ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂಬಂಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಆದ ಕಾರಣ ಫೆ 26 ರ ಪರೀಕ್ಷೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅದನ್ನು ಮುಂದೂಡಿಟ್ಟು. 

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಫೆ 27ರಂದು ನಡೆಯಬೇಕಿದ್ದ ಇಂಗ್ಲಿಷ್​ ಪರೀಕ್ಷೆಯನ್ನು ಈಶಾನ್ಯ ದೆಹಲಿಯ 73 ಹಾಗೂ ಪೂರ್ವ ದೆಹಲಿಯ 7 ಕೇಂದ್ರಗಳಲ್ಲಿ ಮುಂದೂಡಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com