ಚಾರ್ಜ್ ಶೀಟ್ ಸಲ್ಲಿಸುವಲ್ಲಿ ಎನ್ಐಎ ವಿಫಲ: ಪುಲ್ವಾಮಾ ದಾಳಿಯ ಆರೋಪಿಗೆ ಜಾಮೀನು!

ಪುಲ್ವಾಮಾದಲ್ಲಿ ನಡೆದ ಭಾರತೀಯ ಯೋಧರ ಹತ್ಯಾಕಾಂಡಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶವಾಸಿಗಳು ವೀರ ಯೋಧರನ್ನು ನೆನೆದು ಕಣ್ಣೀರು ಹಾಕಿದ್ದರು. ಇದೀಗ ಅಂತಹ ಪುಲ್ವಾಮಾ ದಾಳಿಯ ಆರೋಪಿಗೆ ಕೋರ್ಟ್ ಜಾಮೀನು ನೀಡಿದೆ. 
ಪುಲ್ವಾಮಾ ದಾಳಿ ಚಿತ್ರ
ಪುಲ್ವಾಮಾ ದಾಳಿ ಚಿತ್ರ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಭಾರತೀಯ ಯೋಧರ ಹತ್ಯಾಕಾಂಡಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶವಾಸಿಗಳು ವೀರ ಯೋಧರನ್ನು ನೆನೆದು ಕಣ್ಣೀರು ಹಾಕಿದ್ದರು. ಇದೀಗ ಅಂತಹ ಪುಲ್ವಾಮಾ ದಾಳಿಯ ಆರೋಪಿಗೆ ಕೋರ್ಟ್ ಜಾಮೀನು ನೀಡಿದೆ. 

ಪುಲ್ವಾಮಾ ದಾಳಿಯ ತನಿಖೆಯ ಜವಾಬ್ದಾರಿ ಹೊತ್ತಿದ್ದ ಎನ್ಐಎ ತಂಡ ನಿಗದಿತ ಸಮಯದೊಳಗೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 

ಫೆಬ್ರವರಿ 18ರಂದು ಚಾರ್ಜ್ ಶೀಟ್ ಸಲ್ಲಿಸಲು ಎನ್ಐಎಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಸಮಯದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಎನ್ಐಎ ವಿಳಂಬ ಮಾಡಿದ್ದರಿಂದ ಬಂಧಿತ ಆರೋಪಿ ಯೂಸೂಪ್ ಚೋಪನ್ ಗೆ ಜಾಮೀನು ನೀಡಿದೆ.

ಎನ್ಐಎ ಅಧಿಕಾರಿಗಳು ಆರೋಪಿ ವಿರುದ್ಧ ಪೂರಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಸದೆ ಸುಮ್ಮನಿದ್ದರು. ಹೀಗಾಗಿ ನ್ಯಾಯಧೀಶ ಪ್ರವೀಣ್ ಸಿಂಗ್ ಆರೋಪಿಗೆ 50 ಸಾವಿರ ಬಾಂಡ್ ನ ಸ್ಯೂರಿಟಿ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಭಾರತೀಯ ಯೋಧರ ಬಸ್ ಮೇಲೆ ಉಗ್ರ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com