ಅಮೆರಿಕ ಚುನಾವಣೆಯಲ್ಲೂ ಹಸ್ತಕ್ಷೇಪ: ಬರ್ನಿ ಸ್ಯಾಂಡರ್ಸ್ ಗೆ ಬಿಎಲ್ ಸಂತೋಷ್ ಹೇಳಿದ್ದೇನು?

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟೀಕೆ ಮಾಡಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಗೆ ಆರ್ ಎಸ್ಎಸ್ ನಾಯಕ ಬಿಎಲ್ ಸಂತೋಷ್ ತಿರುಗೇಟು ನೀಡಿ ಬಳಿಕ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟೀಕೆ ಮಾಡಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಗೆ ಆರ್ ಎಸ್ಎಸ್ ನಾಯಕ ಬಿಎಲ್ ಸಂತೋಷ್ ತಿರುಗೇಟು ನೀಡಿ ಬಳಿಕ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಹೌದು..  ಅಮೆರಿಕ ಅಧ್ಯಕ್ಷರ ಭಾರತ ಪ್ರವಾಸದ ನಡುವೆಯೇ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ದೆಹಲಿ ಹಿಂಸಾಚಾರದ ಬಗ್ಗೆ ಕೇಳಿದ್ದೇನೆ. ಆದರೆ ಅದರ ಕುರಿತು ಅವರ (ಮೋದಿ) ಜತೆ ಚರ್ಚಿಸಿಲ್ಲ, ಅದು ಭಾರತಕ್ಕೆ ಬಿಟ್ಟಿದ್ದು ಎಂದು ಹೇಳಿದ್ದರು. 

ಇನ್ನು ಡೊನಾಲ್ಡ್ ಟ್ರಂಪ್ ರ ಈ ಹೇಳಿಕೆಯನ್ನು ಟೀಕಿಸಿದ್ದ  ಅಮೆರಿಕಾದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಲಿರುವ ಬರ್ನೀ ಸ್ಯಾಂಡರ್ಸ್ ಟ್ವೀಟ್ ಒಂದನ್ನು ಮಾಡಿದ್ದರು. '200 ಮಿಲಿಯನ್‍ಗೂ ಅಧಿಕ ಮುಸ್ಲಿಮರು ಭಾರತವನ್ನು ತಮ್ಮ ಮನೆಯೆಂದು ಕರೆಯುತ್ತಾರೆ, ಮುಸ್ಲಿಂ ವಿರೋಧಿ ಗುಂಪು ಹಿಂಸಾಚಾರ ಕನಿಷ್ಠ 27 ಜನರನ್ನು ಬಲಿ ಪಡೆದು ಇನ್ನೂ ಹಲವರನ್ನು ಗಾಯಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿ ಟ್ರಂಪ್ `ಅದು ಭಾರತಕ್ಕೆ ಬಿಟ್ಟಿದ್ದು' ಎನ್ನುತ್ತಾರೆ, ಇದು ಮಾನವ ಹಕ್ಕುಗಳ ಕುರಿತಂತೆ ನಾಯಕತ್ವ ವೈಫಲ್ಯ ಎಂದು ಟ್ವೀಟ್ ಮಾಡಿದ್ದರು.

ಬರ್ನಿ ಸ್ಯಾಂಡರ್ಸ್ ಅವರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು, 'ನಾವೆಷ್ಟೇ ತಟಸ್ಥರಾಗಿರಲು ಬಯಸಿದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾತ್ರ ವಹಿಸುವಂತೆ ಮಾಡಲು ನೀವು ಅನಿವಾರ್ಯಗೊಳಿಸುತ್ತಿದ್ದೀರಿ. ಹೀಗೆ ಹೇಳಲು ವಿಷಾದವಿದೆ. ಆದರೆ ನೀವು ಅನಿವಾರ್ಯಗೊಳಿಸುತ್ತಿದ್ದೀರಿ ಎಂದು ಟ್ವೀಟ್ ಮಾಡಿದ್ದರು. ಬಳಿಕ ಸಂತೋಷ್ ಆ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com