ಟಿಎಂಸಿನಿಂದ ರಾಜ್ಯಸಭೆಗೆ ಪ್ರಶಾಂತ್ ಕಿಶೋರ್ ಸ್ಪರ್ಧೆ: ವರದಿ

ಮುಂದಿನ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಮೂಲವೊಂದು ಹೇಳಿದೆ. ಜನತಾದಳ(ಯು) ನಿಂದ ಉಚ್ಚಾಟಿಸಲ್ಪಟ್ಟ ಪ್ರಶಾಂತ್ ಕಿಶೋರ್ ಟಿಎಂಸಿ ನಿಂದ ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ಮೂಲದಲ್ಲಿ ಉಲ್ಲೇಖಿಸಲಾಗಿದೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ: ಮುಂದಿನ ತಿಂಗಳು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಮೂಲವೊಂದು ಹೇಳಿದೆ. ಜನತಾದಳ(ಯು) ನಿಂದ ಉಚ್ಚಾಟಿಸಲ್ಪಟ್ಟ ಪ್ರಶಾಂತ್ ಕಿಶೋರ್ ಟಿಎಂಸಿ ನಿಂದ ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ಮೂಲದಲ್ಲಿ ಉಲ್ಲೇಖಿಸಲಾಗಿದೆ.

ಮಾರ್ಚ್ 26 ರಂದು ರಾಜ್ಯಸಭೆ ಸ್ಥಾನಗಳಿಗೆ ಮತದಾನ ನಿಗದಿಯಾಗಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಹೊಸ ಮುಖಗಳನ್ನು ಹುಡುಕಾಟದಲ್ಲಿದ್ದಾರೆ. ಸಂಸತ್ತಿನ ಮೇಲ್ಮನೆಯಲ್ಲಿ ಹೆಚ್ಚು ಸಕ್ರಿಯ ಸದಸ್ಯರನ್ನು ಅವರು ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ.

 ಪ್ರಸ್ತುತ ಮನೀಶ್ ಗುಪ್ತಾ, ಜೋಗನ್ ಚೌಧರಿ, ಅಹ್ಮದ್ ಹಸನ್ ಇಮ್ರಾನ್ ಮತ್ತು ಕೆಡಿ ಸಿಂಗ್ ಪ್ರಸ್ತುತ ರಾಜ್ಯಸಭೆಯಲ್ಲಿ ಟಿಎಂಸಿ ಸದಸ್ಯರಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಅವರ ಕಾರ್ಯಾವಧಿ ಮುಗಿಯಲಿದೆ.

"ಪ್ರಸ್ತುತ ರಾಷ್ಟ್ರೀಯ ರಾಜಕಾರಣದ ಪರಿಸ್ಥಿತಿಯನ್ನು ಗಮನಿಸಿ  ಹೆಚ್ಚು ಸಕ್ರಿಯ ರಾಜಕಾರಣಿಗಳು ಮತ್ತು ರಾಜ್ಯಸಭಾ ಸಂಸದರ ಅಗತ್ಯವನ್ನು ಪಕ್ಷ ಬಯಸಿದೆ. ಆದ್ದರಿಂದ ಯುವಕರಿಗೆ ಅವಕಾಶ ಸಿಗಬೇಕು. ಪ್ರಶಾಂತ್ ಕಿಶೋರ್ ಬಿಜೆಪಿ ವಿರುದ್ಧ ಹೋರಾಟ ನಡೆಸಿರುವ ಮುಂಚೂಣಿ ನಾಯಕ. ಇದು ರಾಜ್ಯಸಭೆಯಲ್ಲಿ ಟಿಎಂಸಿಗೆ ಸಹಾಯ ಮಾಡುತ್ತದೆ. ಅವರ ಹೊರತಾಗಿ ದಿನೇಶ್ ತ್ರಿವೇದಿ ಮತ್ತು ಮೌಸಮ್ ನೂರ್  ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ"

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆಯ ಪ್ರಕಾರ, ಟಿಎಂಸಿ ರಾಜ್ಯಸಭೆಯಲ್ಲಿ ನಾಲ್ಕು ಸ್ಥಾನ ಪಡೆಯಲಿದೆ. ಇದಲ್ಲದೆ ಐದನೇ ಸ್ಥಾನಕ್ಕೆ ಆದರೆ ಸಿಪಿಎಂ-ಕಾಂಗ್ರೆಸ್ ಅಥವಾ ಟಿಎಂಸಿ-ಕಾಂಗ್ರೆಸ್ ಒಕ್ಕೂಟದ ಬೆಂಬಲದೊಂದಿಗೆ ಅಭ್ಯರ್ಥಿ ನಿಲ್ಲಲಿದ್ದಾರೆ. ಈ ಐದನೇ ಸ್ಥಾನವನ್ನು ಪ್ರಸ್ತುತ ರೀಟಾಬ್ರತಾ ಬ್ಯಾನರ್ಜಿ ಹೊಂದಿದ್ದಾರೆ, ಅವರು 2014 ರಲ್ಲಿ ಸಿಪಿಎಂ ಪಕ್ಷದವರಾಗಿ ಆಯ್ಕೆಯಾದರು ಆದರೆ 2017 ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com