ಪಿಒಕೆ ಗುರಿಯಾಗಿಸಿ ದಾಳಿ ಮಾಡಲು ಸಿದ್ಧ.. ಆದರೆ: ಸೇನಾ ಮುಖ್ಯಸ್ಥ ನರಾವಣೆ

ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಸೇನೆ ಸಿದ್ದವಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಹೇಳಿದ್ದಾರೆ.

Published: 02nd January 2020 11:07 PM  |   Last Updated: 02nd January 2020 11:07 PM   |  A+A-


Indian Army Chief MM Naravane

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ನವದೆಹಲಿ: ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಸೇನೆ ಸಿದ್ದವಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಹೇಳಿದ್ದಾರೆ.

ಮಾಧ್ಯಮವೊಂದರೊಂದಿಗೆ ಮಾತನಾಡಿದ ನರಾವಣೆ ಅವರು, ಆದೇಶ ನೀಡಿದರೆ ಯಾವುದೇ ಕ್ಷಣದಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸೇನೆ ಸಿದ್ಧವಾಗಿದೆ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಉಪಾಯಗಳಿವೆ. ಅಲ್ಲದೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದು ಹೇಳಿದರು.

'ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ ಸೇರಿ ಗಡಿಯಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಯೋಜನೆಗಳಿವೆ. ಅಗತ್ಯವಿದ್ದರೆ, ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ಮಾಡಬೇಕಾದ ಯಾವುದೇ ಕೆಲಸವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ. ಪರಿಸ್ಥಿತಿ ಬಂದರೆ ಭಯೋತ್ಪಾದನೆ ವಿರುದ್ಧ ಎಂತಹ ನೀತಿ ಅನುಸರಿಸಲೂ ನಾವು ಸಿದ್ಧ. ಆದರೆ ಸದ್ಯಕ್ಕೆ, ಆಕ್ರಮಣಗಳು ಅಥವಾ ಒಳನುಸುಳುವಿಕೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದ ನರಾವಣೆ, ನಾವು ವಿವಿಧ ಪ್ರದೇಶಗಳಲ್ಲಿ ಮತ್ತು ಸಂಕಷ್ಟದ ಪರಿಸ್ಥಿತಿಗಳಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು. ಇದು ನಮಗೆ ನಿಜವಾದ ಚಾಲೆಂಜ್​ ಎಂದು ನರಾವಣೆ ಹೇಳಿದರು.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp