ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು: ವಿವಾದದ ಕಿಡಿಹೊತ್ತಿಸಿದ ಕಾಂಗ್ರೆಸ್ ಕೈಪಿಡಿ

ಖ್ಯಾತ ಹಿಂದೂವಾದಿ ಎಂದು ಕರೆಯಲ್ಪಡುವ ವಿನಾಯಕ ದಾಮೋದರ್ ಸಾವರ್ಕರ್ ಹಾಗೂ ನಾಥುರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಪ್ರಕಟಿಸಿರುವ ಕೈಪಿಡಿಯೊಂದು ಇದೀಗ ವಿವಾದದ ಕಿಡಿ ಹೊತ್ತಿಸಿದೆ. 
ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು: ವಿವಾದದ ಕಿಡಿಹೊತ್ತಿಸಿದ ಕಾಂಗ್ರೆಸ್ ಕೈಪಿಡಿ
ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು: ವಿವಾದದ ಕಿಡಿಹೊತ್ತಿಸಿದ ಕಾಂಗ್ರೆಸ್ ಕೈಪಿಡಿ

ಭೋಪಾಲ್: ಖ್ಯಾತ ಹಿಂದೂವಾದಿ ಎಂದು ಕರೆಯಲ್ಪಡುವ ವಿನಾಯಕ ದಾಮೋದರ್ ಸಾವರ್ಕರ್ ಹಾಗೂ ನಾಥುರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಪ್ರಕಟಿಸಿರುವ ಕೈಪಿಡಿಯೊಂದು ಇದೀಗ ವಿವಾದದ ಕಿಡಿ ಹೊತ್ತಿಸಿದೆ. 

ಹೌ ಬ್ರೇವ್ ವಾಸ್ ವೀರ್ ಸಾವರ್ಕರ್ ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕವನ್ನು ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ ಹಂಚಲಾಗಿದ್ದು, ಪುಸ್ತಕದಲ್ಲಿ ಸಾವರ್ಕರ್ ಹಾಗೂ ಗೋಡ್ಸೆ ಬಗ್ಗೆ ಉಲ್ಲೇಖ ಮಾಡಲಾಗಿದೆ. 

ಸಾವರ್ಕರ್ ಹಾಗೂ ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಫ್ರೀಡಂ ಅಟ್ ಮಿಡ್ ನೈಟ್ ಪುಸ್ತಕದಲ್ಲಿ ತಿಳಿಸಿರುವ ಘಟನೆಯೊಂದನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ. 

ಬ್ರಹ್ಮಚರ್ಯೆಯನ್ನು ಸ್ವೀಕರಿಸುವುದಕ್ಕೂ ಮುನ್ನ ಗೋಡ್ಸೆ ದೈಹಿಕ ಸಂಬಂಧದ ಬಗ್ಗೆ ಒಂದೇ ಒಂದು ಉಲ್ಲೇಖವಿದೆ. ಗೋಡ್ಸೆ ಹಾಗೂ ಸಾವರ್ಕರ್ ನಡುವಿನ ದೈಹಿಕ ಸಂಬಂಧ ಎಂದು ಕೈಪಿಡಿಯಲ್ಲಿ ತಿಳಿಸಲಾಗಿದೆ. ಕೈಪಿಡಿಯಲ್ಲಿರುವ ಈ ವಿಚಾರ ಇದೀಗ ವಿವಾದಕ್ಕೆ ದಾರಿ ಮಾಡಿಕೊಡ್ಡಿದೆ. 

ಅಲ್ಪಸಂಖ್ಯಾತ ಮಹಿಳೆಯನ್ನು ಅತ್ಯಾಚಾರ ನಡೆಸುವಂತೆ ಸಾವರ್ಕರ್ ಪ್ರೇರೇಪಿಸಿದರೇ? ಎಂಬ ಪ್ರಶ್ನ ಹಾಗೂ ಇದಕ್ಕೆ ಉತ್ತರ ಹೌದು ಎಂದು ನೀಡಲಾಗಿದೆ. ಸಾವರ್ಕರ್ 12 ವರ್ಷದ ಯುವಕರಾಗಿದ್ದಾಗ ಮಸೀದಿಯೊಂದಕ್ಕೆ ಕಲ್ಲೆಸಿದ್ದರು. ಆರ್'ಎಸ್ಎಸ್ ಎಂಬ ಸಂಘಟನೆಯು ಹಿಟ್ಲರ್ ನ ನಾಜಿಯಿಸಂ ಹಾಗೂ ಮುಸ್ಲೋನಿಯ ಫ್ಯಾಸಿಯಿಸಂನಿಂದ ಪ್ರೇರೇಪಿತಗೊಂಡಿದೆ ಎಂದು ಉಲ್ಲೇಖಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com