ನಾಂಕನಾ ಸಾಹೀಬ್ ಗುರುದ್ವಾರ ಮೇಲೆ ದಾಳಿ: ಪಾಕ್ ಗೆ ಎಸ್ ಜಿಪಿಸಿಯ ನಿಯೋಗ 

ನಾಂಕನ  ಸಾಹೀಬ್  ಗುರುದ್ವಾರ ದಾಳಿಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಗುರುದ್ವಾರಗಳ ನಿರ್ವಹಣೆ ಮಾಡುತ್ತಿರುವ ದಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ( ಎಸ್ ಜಿಪಿಸಿ) ನಾಲ್ಕು ಸದಸ್ಯರನ್ನೊಳಗೊಂಡ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ. 
ನಾಂಕನಾ ಸಾಹೀಬ್ ಗುರುದ್ವಾರ
ನಾಂಕನಾ ಸಾಹೀಬ್ ಗುರುದ್ವಾರ

ಚಂಡೀಗಢ:  ನಾಂಕನ  ಸಾಹೀಬ್  ಗುರುದ್ವಾರ ದಾಳಿಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು 
ಪರಿಶೀಲಿಸಲು ಗುರುದ್ವಾರಗಳ ನಿರ್ವಹಣೆ ಮಾಡುತ್ತಿರುವ ದಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ( ಎಸ್ ಜಿಪಿಸಿ) ನಾಲ್ಕು ಸದಸ್ಯರನ್ನೊಳಗೊಂಡ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ. 

ಚಾರಿತ್ರಿಕ ಸಿಖ್ಖರ ಪವಿತ್ರ ತಾಣವಾಗಿರುವ ನಾಂಕನ್ ಸಾಹೀಬ್ ಗುರುದ್ವಾರದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ  ಎಸ್ ಜಿಪಿಸಿಯ ಮುಖ್ಯಸ್ಥ ಗೋಬಿಂದ್ ಸಿಂಗ್ ಲಾಂಗ್ ವಾಲ್, ದುಷ್ಕರ್ಮಿಗಳ ವಿರುದ್ಧ ಪಾಕಿಸ್ತಾನ ಸರ್ಕಾರ  ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಿನ ಸಿಖ್ಖರಿಗೆ ಸೂಕ್ತ ಭದ್ರತೆ ಒದಗಿಸುವಂತೆ  ಒತ್ತಾಯಿಸಿದ್ದಾರೆ

ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ನಾಲ್ವರು ಸದಸ್ಯರನ್ನೊಳಗೊಡು ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಈ ನಿಯೋಗ ನಾಂಕನಾ ಸಾಹೀಬ್ ನಲ್ಲಿ ಸಿಖ್ಖ್ ಕುಟುಂಬಗಳನ್ನು ಭೇಟಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com