ಕೋಟಾ: ಆಸ್ಪತ್ರೆಯಲ್ಲಿ ಜೀವರಕ್ಷಕ ಸಲಕರಣೆಗಳ ಕೊರತೆ, ಕೊರೆಯುವ ಚಳಿಯಿಂದ ಶಿಶುಗಳ ಸಾವು

ದೇಶದಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿರುವ ರಾಜಸ್ತಾನದ ಕೋಟಾದಲ್ಲಿನ ಜೆ. ಕೆ. ಲಾನ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 105 ಶಿಶುಗಳ ದಾರುಣ ಸಾವಿನ ಪ್ರಕರಣಕ್ಕೆ ಕಾರಣವೇನೆಂಬುದು ತಿಳಿದುಬಂದಿದೆ. 
ಶಿಶುವನ್ನು ವೈದ್ಯರಿಗೆ ತೋರಿಸಲು ಆಸ್ಪತ್ರೆಯಲ್ಲಿ ಕಾಯುತ್ತಿರುವ ತಾಯಿಯ ಚಿತ್ರ
ಶಿಶುವನ್ನು ವೈದ್ಯರಿಗೆ ತೋರಿಸಲು ಆಸ್ಪತ್ರೆಯಲ್ಲಿ ಕಾಯುತ್ತಿರುವ ತಾಯಿಯ ಚಿತ್ರ

ಜೈಪುರ: ದೇಶದಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿರುವ ರಾಜಸ್ತಾನದ ಕೋಟಾದಲ್ಲಿನ ಜೆ. ಕೆ. ಲಾನ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 105 ಶಿಶುಗಳ ದಾರುಣ ಸಾವಿನ ಪ್ರಕರಣಕ್ಕೆ ಕಾರಣವೇನೆಂಬುದು ತಿಳಿದುಬಂದಿದೆ. 

ಆಸ್ಪತ್ರೆಯಲ್ಲಿ ಜೀವರಕ್ಷಕ ಸಲಕರಣೆಗಳ ಕೊರತೆ ಹಾಗೂ ಕೊರೆಯುವ  ಚಳಿಯಿಂದ ತತ್ತರಿಸಿ ಶಿಶುಗಳು ಸಾವನ್ನಪ್ಪಿರುವುದಾಗಿ ಸರ್ಕಾರ ನೇಮಿಸಿದ ಸಮಿತಿಯ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. 

ಹೈಪೊಥೆರ್ಮಿಯಾದಿಂದ ಶಿಶುಗಳು ಮೃತಪಟ್ಟಿರುವ ಬಗ್ಗೆ ರಾಜಸ್ತಾನ ನೇಮಿಸಿದ  ಸಮಿತಿಯ ತನಿಖಾ  ವರದಿಯಲ್ಲಿ ತಿಳಿಸಲಾಗಿದೆ. ಶಿಶುಗಳ  ದೇಹದ ಸಾಮಾನ್ಯ ಉಷ್ಣಾಂಶ 98. 6 ಫ್ಯಾರನ್ ಹೀಟ್  (37 ಸೆಲ್ಸಿಯಸ್ )ಇರಬೇಕಾಗುತ್ತದೆ.  ಆದರೆ,  ಉಷ್ಣತೆ 95 ಪ್ಯಾರನ್ ಹೀಟ್  ( 35 ಸೆಲ್ಸಿಯಸ್ ) ಗಿಂತ ಕಡಿಮೆ ಆದಾಗ ಹೈಪೊಥೆರ್ಮಿಯಾ ಉಂಟಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೊರೆಯುವ ಚಳಿ ಇದ್ದರೂ ಅಗತ್ಯವಾದಷ್ಟು ಪ್ರಮಾಣದಲ್ಲಿ ಜೀವರಕ್ಷಕ ಸಲಕರಣೆಗಳು ಆಸ್ಪತ್ರೆಯಲ್ಲಿ ಇಲ್ಲದಿದುದ್ದರಿಂದ ಶಿಶುಗಳ ಸಾವು ಪ್ರಕರಣ ಮುಂದುವರೆದಿದೆ ಎನ್ನಲಾಗಿದೆ.

ನವಜಾತ ಶಿಶುಗಳ ದೇಹದ ಉಷ್ಠಾಂಶ 36 ಡಿಗ್ರಿ ಸೆಲ್ಸಿಯಸ್ ಇರಬೇಕಾಗುತ್ತದೆ. ಆದ್ದರಿಂದ ಅವುಗಳನ್ನು 
ಸಾಮಾನ್ಯ ಉಷ್ಠಾಂಶ ಇರುವ ವಾರ್ಮರ್ಸ್ ಗಳಲ್ಲಿ ಇಡಲಾಗುತ್ತದೆ. ಆದರೆ, ಆಸ್ಪತ್ರೆಯಲ್ಲಿನ ವಾರ್ಮರ್ಸ್ ಗಳು ಕೆಲಸ ಮಾಡುತ್ತಿರಲ್ಲ್ಲ. ಇದರಿಂದಾಗಿ ಶಿಶುಗಳ ದೇಹದ ಉಷ್ಠಾಂಶ ಕ್ಷೀಣಿಸಿದೆ ಎಂದು ತಿಳಿಸಲಾಗಿದೆ. 

28 ನೆಬುಲೈಸರ್ಸ್ ಗಳ ಪೈಕಿ 28 ಕಾರ್ಯನಿರ್ವಹಿಸುತ್ತಿರಲಿಲ್ಲ. 111 ಇನ್ಫ್ಯೂಷನ್ ಪಂಪ್‌ ಗಳ ಪೈಕಿ 81 ಕಾರ್ಯನಿರ್ವಹಿಸುತ್ತಿರಲಿಲ್ಲ. ಪ್ಯಾರಾ ಮಾನಿಟರ್ ಹಾಗೂ ಪಲ್ಸ್ ಅಕ್ಸಿ ಮೀಟರ್ ಸ್ಥಿತಿಯೂ ಇದೇ ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. 

ಆಸ್ಪತ್ರೆಯಲ್ಲಿನ ಆಕ್ಸಿಜನ್ ಪೈಪ್ ಲೈನ್ ಹದಗೆಟ್ಟಿದ್ದರಿಂದ ಸಿಲಿಂಡರ್ ಮೂಲಕ ಆಕ್ಸಿಜನ್ ನ್ನು ಶಿಶುಗಳಿಗೆ ಪೂರೈಸಲಾಗುತ್ತಿತ್ತು. ಆಶ್ಚರ್ಯವೆಂದರೆ ಐಸಿಯುವನ್ನು ಒಂದು ತಿಂಗಳಿಂದ ಶುದ್ದಿಕರಿಸಿರಲಿಲ್ಲ ಎಂಬುದು ತಿಳಿದುಬಂದಿದೆ. ಜೆಕೆ ಲಾನ್ ಆಸ್ಪತ್ರೆಯ ಬಹುತೇಕ ಶಿಶು ತಜ್ಞರನ್ನು ಕೋಟಾದಲ್ಲಿನ ನೂತನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಶಿಶುಗಳಿಗಾಗಿ ಖರೀದಿಸಿದ 40 ಹೀಟರ್ ಗಳ ಬಗ್ಗೆ ಯಾವುದೇ ದಾಖಲೆಗಳಿಲ್ಲ .

ಆರೋಗ್ಯ ಸಚಿವ ರಘು ಶರ್ಮಾ ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ ಹಸಿರು ಕಾರ್ಪೆಟ್ ಮೂಲಕ ಸ್ವಾಗತ ನೀಡಿದ್ದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಅದೇ ದಿನ ಐದು ತಿಂಗಳ ಶಿಶುವೊಂದು ಮೃತಪಟ್ಟಿತ್ತು. ಆಸ್ಪತ್ರೆಯಲ್ಲಿ ಸಲಕರಣೆಗಳ ಖರೀದಿ ಸಂಬಂಧಿಸಿದಂತೆ ವೈದ್ಯಕೀಯ ಪರಿಶೀಲನೆ ನಡೆಯುತ್ತಿಲ್ಲ ಎಂದು ಮಾಜಿ ಆರೋಗ್ಯ ಸಚಿವ ರಾಜೇಂದ್ರ ರಾಥೋರ್ ಆರೋಪಿಸಿದ್ದಾರೆ.

ಈ ಮಧ್ಯೆ ಇಂದು ಆಸ್ಪತ್ರೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಸಚಿನ್ ಪೈಲಟ್,  ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರವನ್ನು ದೂಷಿಸುವುದು ಸರಿಯಲ್ಲ, ಈ ವಿಚಾರದ ಬಗ್ಗೆ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com