30 ಮಾಧ್ಯಮಗಳಿಗೆ ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ

ನಾಗರಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 30 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್....
ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ನವದೆಹಲಿ: ನಾಗರಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 30 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಮೊದಲ ಅಂತಾರಾಷ್ಟ್ರ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿದರು.
  
ಯೋಗದ ಕುರಿತು ದೇಶ ಮತ್ತು ವಿದೇಶಗಳಲ್ಲಿ ಜನರಿಗೆ ಹೆಚ್ಚು ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಈ ಗೌರವಗಳನ್ನು ನೀಡಲಾಯಿತು.
  
ಮುದ್ರಣ ಮಾದ್ಯಮಗಳಾದ ಉದಯವಾಣಿ ಬೆಂಗಳೂರು, ಒಡಿಶಾ ಎಕ್ಸ್‌ಪ್ರೆಸ್, ರೊಜ್ನಾಮಾ ರಾಷ್ಟ್ರೀಯ ಸಹಾರಾ ಹಾಗೂ ರೇಡಿಯೋಗಳಾದ ಫೀವರ್ 104 ಎಫ್‌ಎಂ, ಆಲ್ ಇಂಡಿಯಾ ರೇಡಿಯೋ ನವದೆಹಲಿ, ರೇಡಿಯೋ ಮಿಸ್ಟಿ 94.3 ನೇಪಾಳಿ ಮತ್ತು ರೇಡಿಯೋ ಮತ್ತು ಸಂದೇಶ್ ನ್ಯೂಸ್ ಗುಜರಾತಿ, ಅಮೃತಾ ಟೆಲಿವಿಷನ್ ಮಲಯಾಳಂ, ಡಿಡಿ ಕೇಂದ್ರ ಶ್ರೀನಗರ ನ್ಯೂಸ್ ದೆಹಲಿ, ಕೇಂದ್ರ ಉತ್ಪಾದನಾ ಕೇಂದ್ರ, ದೂರದರ್ಶನ ನವದೆಹಲಿ ಮತ್ತು ದೂರದರ್ಶನದ ಇತರರು ಈ ಪ್ರಶಸ್ತಿಗೆ ಭಾಜನರಾದರು.
  
ಇದರ ಅಡಿಯಲ್ಲಿ ಪತ್ರಿಕೆಗಳಲ್ಲಿ ಯೋಗದ ಅತ್ಯುತ್ತಮ ಮಾಧ್ಯಮ ಪ್ರಸಾರಕ್ಕಾಗಿ ಸುಮಾರು 11 ಪ್ರಶಸ್ತಿಗಳನ್ನು ಮತ್ತು ದೂರದರ್ಶನಕ್ಕೆ ಎಂಟು ಮತ್ತು ರೇಡಿಯೊದಲ್ಲಿ ಅತ್ಯುತ್ತಮ ಮಾಧ್ಯಮ ಪ್ರಸಾರಕ್ಕಾಗಿ ಹನ್ನೊಂದು ಪ್ರಶಸ್ತಿಗಳನ್ನು ನೀಡಲಾಯಿತು.
  
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಅವರು ಆರು ಸದಸ್ಯರ ಆಯ್ಕೆ  ಸಮಿತಿಯ ನೇತೃತ್ವ ವಹಿಸಿದ್ದರು. ಸಮಿತಿಯು 16 ಭಾರತೀಯ ಭಾಷೆಗಳಲ್ಲಿ ಪಡೆದ 132 ನಮೂದುಗಳಲ್ಲಿ 30  ನಮೂದುಗಳನ್ನು ಆಯ್ಕೆ ಮಾಡಲಾಗಿದ್ದು, ಇಂಗ್ಲಿಷ್ ಭಾಷೆಯನ್ನು ಮೊದಲ 'ಅಂತರರಾಷ್ಟ್ರೀಯ ಯೋಗ ದಿನ ಮಾಧ್ಯಮ ಪ್ರಶಸ್ತಿ'ಗಳಿಗೆ ಆಯ್ಕೆ ಮಾಡಿದೆ.
  
ಯೋಗದ ಮಹತ್ವವನ್ನು ತಿಳಿಸಿದ ಜಾವಡೇಕರ್ ಯೋಗವು ಆರೋಗ್ಯ ವೃದ್ಧಿಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ವಹಿಸಲಿದ್ದು, ಇದು ದೇಶದ ಪ್ರಮುಖ ಗುರುತಾಗಿದೆ. ಜನರಲ್ಲಿ ಯೋಗದ ಸಂದೇಶವನ್ನು ಹರಡುವುದರಲ್ಲಿ ಮಾತ್ರವಲ್ಲದೆ ವಿವಿಧ ಕಾರ್ಯಕ್ರಮಗಳೊಂದಿಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪಾತ್ರ ಮಹತ್ವದ್ದು ಎಂದರು
  
ಆಯುಷ್ ನ ಶ್ರೀಪಾಡ್ ಯೆಸ್ಸೊ ನಾಯಕ್ ಮಾತನಾಡಿ, ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಅಂಗೀಕರಿಸುವ ಉಪಕ್ರಮವು ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲು ಮತ್ತಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದರು.
  
ನ್ಯಾಯಮೂರ್ತಿ ಪ್ರಸಾದ್, ಯೋಗವು ಯಾವುದೇ ಅಪಾಯವಿಲ್ಲದ ಹೂಡಿಕೆಯಾಗಿದ್ದು ಅದು ವ್ಯಕ್ತಿಗೆ ಪ್ರಯೋಜನಕಾರಿಯಾಗಿದೆ. ನಮ್ಮ ದೇಶದಿಂದ ಯೋಗವು ಪ್ರಪಂಚದಾದ್ಯಂತ ಪಸರಿಸಿದ್ದು ಅದನ್ನು ಎಲ್ಲಾ ರಾಷ್ಟ್ರಗಳು ಅಳವಡಿಸಿಕೊಂಡಿದ್ದು ಇಂದು ವಿಶ್ವದೆಲ್ಲೆಡೆ ವಿಸ್ತರಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com